
ವೈದ್ಯನ ಮನೆಗೆ ಖನ್ನ…ಹಾಡುಹಗಲೇ ಚಿನ್ನಾಭರಣ ದೋಚಿ ಪರಾರಿ…
- CrimeMysore
- May 29, 2023
- No Comment
- 40
ನಂಜನಗೂಡು,ಮೇ30,Tv10 ಕನ್ನಡ
ಹಾಡುಹಗಲೇ ವೈಧಯನ ಮನೆಗೆ ಖನ್ನ ಹಾಕಿದ ಖದೀಮರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ನಂಜನಗೂಡಿನ ಹೌಸಿಂಗ್ ಬೋರ್ಡನಲ್ಲಿ ನಡೆದಿದೆ.ಡಾ.ವೈದ್ಯನಾಥ್ ಎಂಬುವರ ಮನೆಯಲ್ಲಿ ಘಟನೆ ನಡೆದಿದೆ. ವಿದ್ಯಾನಗರದ ಟೆಂಪೋ ಸ್ಡ್ಯಾಂಡ್ ಬಳಿ ಕ್ಲಿನಿಕ್ ನಡೆಸುತ್ತಿರುವ ಡಾ.ವೈದ್ಯನಾಥ್ ರವರ ಮನೆಯಲ್ಲಿ ಭಾನುವಾರ ಮಧ್ಯಾಹ್ನ ಯಾರು ಇಲ್ಲದ ವೇಳೆ ದುಷ್ಕರ್ಮಿಗಳು ಕೈ ಚಳಕ ತೋರಿಸಿದ್ದಾರೆ.ಮನೆ ಬೀಗ ಮುರಿದು ಒಳ ಪ್ರವೇಶಿಸಿರುವ ಕಳ್ಳರು 400 ಗ್ರಾಂ ಗೂ ಹೆಚ್ಚು ಚಿನ್ನಾಭರಣಗಳನ್ನ ದೋಚಿ ಪರಾರಿಯಾಗಿದ್ದಾರೆ.ನಂಜನಗೂಡು ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.ಖದೀಮರ ಬಲೆಗೆ ಪೊಲೀಸರು ಜಾಲ ಬೀಸಿದ್ದಾರೆ…