ಕಾಂಬೋಡಿಯಾ ಸಾರ್ವತ್ರಿಕ ಚುನಾವಣೆ…ಮೈಲ್ಯಾಕ್ ನಿಂದ ಶಾಯಿ ರವಾನೆ…
- MysoreTV10 Kannada Exclusive
- May 30, 2023
- No Comment
- 51
ಮೈಸೂರು,ಮೇ30,Tv10 ಕನ್ನಡ
ಕಾಂಬೋಡಿಯಾದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವ ಹಿನ್ನಲೆ ಮೈಸೂರಿನ ಮೈಲ್ಯಾಕ್ ನಿಂದ ೫೨ ಸಾವಿರ ಬಾಟಲ್ ಅಳಿಸಲಾಗದ ಶಾಯಿ ರವಾನೆಯಾಗಿದೆ. ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆಯಿಂದ ಅಳಿಸಲಾಗದ ಶಾಯಿ ರವಾನಿಸಲಾಯಿತು.
ಬೇಡಿಕೆಯಂತೆ ೭೦ ಮಿ.ಲೀ ಅಳತೆಯ ೫೨,೦೦೦ ಬಾಟಲ್ ಅಳಿಸಲಾಗದ ಶಾಯಿಯನ್ನು ಮಂಗಳವಾರ ರಫ್ತು ಮಾಡಲಾಯಿತು.
ಸದರಿ ಸಾಮಗ್ರಿಯನ್ನು ರಫ್ತು ಮಾಡುವಾಗ ವಿಶ್ವೇಶ್ವರಯ್ಯ ರಫ್ತು ಉತ್ತೇಜನಾ ಕೇಂದ್ರದ ನಿರ್ದೇಶಕ ಸತೀಶ್, ಎಂಪಿವಿಎಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ. ಕುಮಾರಸ್ವಾಮಿ, ಪ್ರಧಾನ ವ್ಯವಸ್ಥಾಪಕ ಸಿ. ಹರಕುಮಾರ್, ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕಾರ್ಮಿಕರು ಹಾಜರಿದ್ದರು…