ಫೋಕಸ್ ಲೈಟ್ ಮೇಲೆ ಬಸವೇಶ್ವರ ಭಾವಚಿತ್ರವಿರುವ ಬಾವುಟ ತಂದ ವಿವಾದ…ಅರ್ಧಕ್ಕೆ ಸ್ಥಗಿತಗೊಂಡ ಜಾತ್ರೆ…ರಸ್ತೆ ಮಧ್ಯದಲ್ಲಿ ನಿಂತ ತೇರು…ದೇವಾಲಯಕ್ಕೆ ಬೀಗ…ಗ್ರಾಮದಲ್ಲಿ ಬಿಗುವಿನ ವಾತಾವರಣ

ಫೋಕಸ್ ಲೈಟ್ ಮೇಲೆ ಬಸವೇಶ್ವರ ಭಾವಚಿತ್ರವಿರುವ ಬಾವುಟ ತಂದ ವಿವಾದ…ಅರ್ಧಕ್ಕೆ ಸ್ಥಗಿತಗೊಂಡ ಜಾತ್ರೆ…ರಸ್ತೆ ಮಧ್ಯದಲ್ಲಿ ನಿಂತ ತೇರು…ದೇವಾಲಯಕ್ಕೆ ಬೀಗ…ಗ್ರಾಮದಲ್ಲಿ ಬಿಗುವಿನ ವಾತಾವರಣ

ಫೋಕಸ್ ಲೈಟ್ ಮೇಲೆ ಬಸವೇಶ್ವರ ಭಾವಚಿತ್ರವಿರುವ ಬಾವುಟ ತಂದ ವಿವಾದ…ಅರ್ಧಕ್ಕೆ ಸ್ಥಗಿತಗೊಂಡ ಜಾತ್ರೆ…ರಸ್ತೆ ಮಧ್ಯದಲ್ಲಿ ನಿಂತ ತೇರು…ದೇವಾಲಯಕ್ಕೆ ಬೀಗ…ಗ್ರಾಮದಲ್ಲಿ ಬಿಗುವಿನ ವಾತಾವರಣ…

ನಂಜನಗೂಡು,ಜ31,Tv10 ಕನ್ನಡ

ಗ್ರಾಮದ ಫೋಕಸ್ ಲೈಟ್ ಮೇಲೆ ಬಸವೇಶ್ವರರ ಬಾವುಟ ಅಳವಡಿಸಿದ ಹಿನ್ನಲೆ ಉಂಟಾದ ವಿವಾದ ಜಾತ್ರೆ ಸಂಭ್ರಮವನ್ನ ಮೊಟಕುಗೊಳಿಸಿದ ಘಟನೆ ನಂಜನಗೂಡು ತಾಲೂಕು ಹಗಿನವಾಳು ಗ್ರಾಮದಲ್ಲಿ ನಡೆದಿದೆ.ಬಾವುಟ ತೆಗೆಯುವ ವಿಚಾರದಲ್ಲಿ ಎರಡು ಸಮುದಾಯದ ನಡುವೆ ಉಂಟಾದ ಮಾತಿನ ಚಕಮಕಿ ಜಾತ್ರೆ ಸ್ಥಗಿತವಾಗುವಂತೆ ಮಾಡಿದೆ.ವಿದ್ಯುಕ್ತ ಚಾಲನೆ ದೊರೆತು ಅಧ್ದೂರಿಯಿಂದ ಆರಂಭವಾದ ರಥೋತ್ಸವ ರಸ್ತೆ ಮಧ್ಯದಲ್ಲೇ ಅನಾಥವಾಗಿ ನಿಂತಿದೆ.ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ನಂಜನಗೂಡು ತಾಲೂಕು ಹಗಿನವಾಳು ಗ್ರಾಮದ ಪಟ್ಟದ ರಾಣಿ ಅಮ್ಮ ದೇವತೆಯ ಜಾತ್ರಾ ಮಹೋತ್ಸವಕ್ಕೆ ಇಂದು ಚಾಲನೆ ದೊರೆಯಿತು.ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವ ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸಿದ್ದರು.ದೇವಾಲಯದ ಸಮೀಪವಿರುವ ವೃತ್ತದ ಬಳಿ ಫೋಕಸ್ ಲೈಟ್ ಮೇಲೆ ಬಸವೇಶ್ವರರ ಭಾವಚಿತ್ರವಿರುವ ಬಾವುಟ ಅಳವಡಿಸಲಾಗಿತ್ತು.ಜಾತ್ರೆ ತೇರು ಇದೇ ವೃತ್ತದಿಂದ ಸಾಗಬೇಕಿತ್ತು.ಒಂದು ಸಮುದಾಯ ಬಾವುಟವನ್ನ ತೆರವುಗೊಳಿಸುವಂತೆ ಪಟ್ಟು ಹಿಡಿಯಿತು.ಮತ್ತೊಂದು ಸಮುದಾಯ ಬಾವುಟ ತೆರವುಗೊಳಿಸಲು ವಿರೋಧಿಸಿತು.ಈ ವೇಳೆ ಬಾವುಟದ ಬಳಿ ಅಂಬೇಡ್ಕರ್ ಭಾವಚಿತ್ರ ಅಳವಡಿಸಲು ಮುಂದಾದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮಾತಿನ ಚಕಮಕಿಗೆ ಇಳಿಯಿತು.ಅದ್ದೂರಿಯಿಂದ ಆರಂಭವಾದ ಜಾತ್ರೆಯ ರಥ ಅರ್ಧಕ್ಕೆ ಸ್ಥಗಿತವಾಯಿತು.ರಸ್ತೆ ಮಧ್ಯದಲ್ಲೇ ಅನಾಥವಾಗಿ ನಿಂತಿತು.ಇದೇ ವೇಳೆ ದೇವಾಲಯಕ್ಕೆ ಬೀಗ ಜಡಿದ ಒಂದು ಸಮುದಾಯ ಪೂಜಾ ಕೈಂಕರ್ಯಗಳಿಗೂ ಬ್ರೇಕ್ ಹಾಕಿತು.ಎರಡು ಸಮುದಾಯಗಳು ಯಾವುದೇ ತೀರ್ಮಾನಕ್ಕೆ ಬರದೆ ಪಟ್ಟು ಹಿಡಿದು ಕುಳಿತ ಕಾರಣ ಇದೀಗ ರಥ ರಸ್ತೆ ಮಧ್ಯದಲ್ಲೇ ಅನಾಥವಾಗಿ ನಿಂತಿದೆ.ಸಧ್ಯ ಪೊಲೀಸರು ಸ್ಥಳಕ್ಕೆ ಬಂದು ಎರಡು ಸಮುದಾಯದ ಮುಖಂಡರ ಮನ ಒಲಿಕೆಗೆ ಯತ್ನಿಸಿದರಾದರೂ ಪಟ್ಟು ಸಡಿಲಿಸಲಿಲ್ಲ.ಸಧ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.ಜಾತ್ರೆಯ ಸಂಭ್ರಮಕ್ಕೆ ಮಂಕು ಕವಿದಂತಾಗಿದೆ.ವ್ಯಾಪಾರಿಗಳು ಹೈರಾಣರಾಗಿದ್ದಾರೆ.ಹೊರಗಿನಿಂದ ಬಂದ ಭಕ್ತರು ಬೇಸತ್ತಿದ್ದಾರೆ…

Spread the love

Related post

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ… ಮೈಸೂರು,ಸೆ6,Tv10 ಕನ್ನಡ ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವ್ಯಕ್ತಿಗೆ ಕಬ್ಬಿಣದ ರಾಡು ಚುಚ್ಚಿ ಸ್ಥಳದಲ್ಲೇ…
ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…

ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…

ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ… ಮೈಸೂರು,ಸೆ6,Tv10 ಕನ್ನಡ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಮೇಟಗಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ನಡೆದಿದೆ.ನೇಣು ಬಿಗಿದ ಸ್ಥಿತಿಯಲ್ಲಿ ಶವ…
ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ…

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ……

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ… ಮೈಸೂರು,ಆ30,Tv10 ಕನ್ನಡ ಮೈಸೂರು ಮಹಾನಗರ ಪಾಲಿಕೆಯ ಗಾರ್ಬೇಜ್ ಮುಕ್ತ ಪಾಯಿಂಟ್ ಯೋಜನೆ…

Leave a Reply

Your email address will not be published. Required fields are marked *