ಒಡಿಶಾ ರೈಲು ದುರಂತ ಹಿನ್ನಲೆ…ಹೌರಾದಲ್ಲಿ ಸಿಲುಕಿದ ರಾಜ್ಯದ ಕ್ರೀಡಾಪಟುಗಳು…
- TV10 Kannada Exclusive
- June 3, 2023
- No Comment
- 122

ಒಡಿಶಾ ರೈಲು ದುರಂತ ಹಿನ್ನಲೆ…ಹೌರಾದಲ್ಲಿ ಸಿಲುಕಿದ ರಾಜ್ಯದ ಕ್ರೀಡಾಪಟುಗಳು…
ಮೈಸೂರು,ಜೂ3,Tv10 ಕನ್ನಡ
ಒಡಿಶಾ ರೈಲು ದುರಂತ ಹಿನ್ನೆಲೆ
ಪಶ್ಚಿಮ ಬಂಗಾಳದ ಹೌರಾದಲ್ಲಿ ರಾಜ್ಯದ ವಾಲಿಬಾಲ್ ಕ್ರೀಡಾಪಟುಗಳು ಸಿಲುಕಿದ್ದಾರೆ.ಅಂತರರಾಜ್ಯ ಮಟ್ಟದ ಜ್ಯೂನಿಯರ್ ವಾಲಿಬಾಲ್ ಟೂರ್ನಿಗೆ
ರಾಜ್ಯದ ವಿವಿಧ ಭಾಗಗಳಿಂದ ತೆರಳಿರುವ
31 ಕ್ರೀಡಾಪಟುಗಳು ರಾಜ್ಯಕ್ಕೆ ಹಿಂದಿರುಗಲು ಸಾಧ್ಯವಾಗದೆ ಉಳಿದಿದ್ದಾರೆ. ಮೇ
24ಕ್ಕೆ ರಾಜ್ಯದಿಂದ ಹೌರಾಗೆ ತೆರಳಿದ್ದರು.
ನೆನ್ನೆ 02/06/2023 ರಾತ್ರಿ 10.55ಕ್ಕೆ ಕರ್ನಾಟಕ ಎಕ್ಸ್‌ಪ್ರೆಸ್ ರೈಲಿನಲ್ಲಿ ವಾಪಸ್ಸು ಬರಬೇಕಿತ್ತು.
ರೈಲು ದುರಂತದ ಹಿನ್ನೆಲೆ ರೈಲುಗಳ ಸಂಚಾರ ರದ್ದಾಗಿದ್ದು
ವಾಪಸ್ಸು ರಾಜ್ಯಕ್ಕೆ ಬರಲು ಆಗದ ಕಾರಣ ಹೌರಾದಲ್ಲೇ ಉಳಿದಿದ್ದಾರೆ.ಕ್ರೀಡಾಪಟುಗಳು ಕಾಲೇಜುಗಳಿಗೆ ತೆರಳಬೇಕಾಗಿದೆ.ಪೋಷಕರೂ ಸಹ ಗೊಂದಲದಲ್ಲಿ ಸಿಲುಕಿದ್ದಾರೆ.ಕರ್ನಾಟಕ ರಾಜ್ಯ ತಲುಪಲು ನೆರವಿಗೆ ಬರಬೇಕೆಂದು ತರಬೇತುದಾರ ಮಹದೇವ ಧರ್ಮಾಪುರ ಮನವಿ ಮಾಡಿದ್ದಾರೆ…
Pl