ಎದುರು ಮನೆ ಆಂಟಿ ಕೈ ಚಳಕ…? 27 ಲಕ್ಷ ನಗದು 300 ಗ್ರಾಂ ಚಿನ್ನಾಭರಣ ಕಳುವು…

ಬನ್ನೂರು,ಜೂ7,Tv10 ಕನ್ನಡ
ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ವೇಳೆ ಮನೆಯಲ್ಲಿ ಇಟ್ಟಿದ್ದ 27 ಲಕ್ಷ ನಗದು ಹಾಗೂ 308 ಗ್ರಾಂ ಚಿನ್ನಾಭರಣ ಕಳುವಾದ ಘಟನೆ ಬನ್ನೂರಿನ ಹೊರಕೇರಿ ವಾರ್ಡ್ ನಲ್ಲಿ ನಡೆದಿದೆ.ಗೋವಿಂದ ಎಂಬುವರ ಮನೆಯ ಬೀರು ಬಾಗಿಲು ಮುರಿದಿರುವ ಚಾಲಾಕಿಗಳು ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ.ತಮ್ಮ ಮನೆಗೆ ಹೊಂದಿಕೊಂಡಂತೆ ಮತ್ತೊಂದು ಮನೆಯಲ್ಲಿ ವಾಸ ಮಾಡುತ್ತಿರುವ ತಾಯಿ ಮಗಳು ಕಳ್ಳತನ ಮಾಡಿರುವುದಾಗಿ ಗೋವಿಂದ ರವರು ಆರೋಪಿಸಿ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಜೂ 5 ರಂದು ಗೋವಿಂದ ರವರು ತಾವು ಹಾಗೂ ತಮ್ಮ ಸಹೋದರನ ಕುಟುಂಬ ಸಮೇತ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದಾರೆ.ಜೂನ್ 6 ರಂದು ಹಿಂದಿರುಗಿದಾಗ ಮನೆಯಲ್ಲಿದ್ದ ಲಾಕರ್ ಬೀಗ ಮುರಿದಿದ್ದು ಅದರಲ್ಲಿದ್ದ 27 ಲಕ್ಷ ನಗದು ಹಾಗೂ 308 ಗ್ರಾಂ ಒಡವೆಗಳು ನಾಪತ್ತೆಯಾಗಿದೆ.ಅಕ್ಕನ ಮಗನ ಮದುವೆಗೆ ಉಡುಗೊರೆಯಾಗಿ ನಿವೇಶನ ಖರೀದಿಸುವ ಸಲುವಾಗಿ ಗೋವಿಂದ ಹಣವನ್ನ ಹೊಂದಿಸಿ ಇಟ್ಟಿದ್ದರು.ಈ ವಿಚಾರ ಮುಂದಿನ ಮನೆಯಲ್ಲಿದ್ದ ತಾಯಿ ಮಗಳಾದ ಮೀನಾಕ್ಷಮ್ಮ ಹಾಗೂ ರತ್ನ ಇಬ್ಬರಿಗೆ ಮಾತ್ರ ತಿಳಿದಿತ್ತು.ಮನೆಯ ಸದಸ್ಯರಂತೆ ಗೋವಿಂದ ಮನೆಯವರ ಜೊತೆ ಇವರು ಆತ್ಮೀಯವಾಗಿದ್ದರು.ನಗದು ಮತ್ತು ಒಡವೆಗಳನ್ನ ಮೀನಾಕ್ಷಮ್ಮ ಹಾಗೂ ರತ್ನ ರವರೇ ಕಳುವು ಮಾಡಿದ್ದಾರೆಂದು ಗೋವಿಂದ ಆರೋಪಿಸಿ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ…

Spread the love

Related post

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ…

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ……

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ… ಮೈಸೂರು,ಆ30,Tv10 ಕನ್ನಡ ಮೈಸೂರು ಮಹಾನಗರ ಪಾಲಿಕೆಯ ಗಾರ್ಬೇಜ್ ಮುಕ್ತ ಪಾಯಿಂಟ್ ಯೋಜನೆ…
ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು ನ್ಯಾಯಾಲಯ ತೀರ್ಪು…

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು…

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು ನ್ಯಾಯಾಲಯ ತೀರ್ಪು… ಮೈಸೂರು,ಆ20,Tv10 ಕನ್ನಡ ಹಳೇ ದ್ವೇಷದ ಹಿನ್ನಲೆ ನಡೆದ ಗಲಾಟೆಯಲ್ಲಿ ಕಾರಿನ ಬ್ಯಾನೆಟ್ ಮೇಲೆ…
50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ… ಮೈಸೂರು,ಆ19,Tv10 ಕನ್ನಡ 14-03-2023 ರ ನಿರ್ದೇಶನ ಉಲ್ಲಂಘಿಸಿ 50-50 ಅನುಪಾತದಡಿ ಹಂಚಿಕೆ ಮಾಡಿರುವ…

Leave a Reply

Your email address will not be published. Required fields are marked *