RO ಪ್ಲಾಂಟ್ ನಲ್ಲಿ ಕಲುಷಿತ ನೀರು…ಆರ್.ಟಿ.ಐ.ಕಾರ್ಯಕರ್ತನ ದೂರಿಗೆ ಎಚ್ಚೆತ್ತ ಅಧಿಕಾರಿಗಳು…ಸ್ವಚ್ಛತೆಗೆ ಮುಂದಾದ ಸಿಬ್ಬಂದಿಗಳು…
- CrimeMysore
- June 12, 2023
- No Comment
- 143

RO ಪ್ಲಾಂಟ್ ನಲ್ಲಿ ಕಲುಷಿತ ನೀರು…ಆರ್.ಟಿ.ಐ.ಕಾರ್ಯಕರ್ತನ ದೂರಿಗೆ ಎಚ್ಚೆತ್ತ ಅಧಿಕಾರಿಗಳು…ಸ್ವಚ್ಛತೆಗೆ ಮುಂದಾದ ಸಿಬ್ಬಂದಿಗಳು…

ಮೈಸೂರು,ಜೂ12,Tv10 ಕನ್ನಡ
ಬೃಂದಾವನ ಬಡಾವಣೆಯಲ್ಲಿರುವ RO ಪ್ಲಾಂಟ್ ನಲ್ಲಿ ಕಲುಷಿತ ನೀರು ಸರಬರಾಜು ಆಗುತ್ತಿದೆ.ಗೊಬ್ಬುವಾಸನೆಯುಕ್ತ ನೀರು ಸರಬರಾಜಾಗುತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದ ಅಧಿಕಾರಿಗಳಿಗೆ ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ದೂರು ನೀಡಿ

ಎಚ್ಚರಿಸಿದ್ದಾರೆ.ದೂರಿನ ಅನ್ವಯದಂತೆ ಎಚ್ಚೆತ್ತ ಅಧಿಕಾರಿಗಳು ಶುದ್ದ ಕುಡಿಯುವ ನೀರಿನ ಘಟಕವನ್ನ ಸ್ವಚ್ಛಗೊಳಿಸಿದ್ದಾರೆ.ಬೋರ್ ವೆಲ್ ಮೂಲಕ ನೀರಿನ ಸಂಪರ್ಕ ಪಡೆಯುವ ಜಾಗದಲ್ಲಿ ಅಕ್ರಮವಾಗಿ ಕಾವೇರಿ ನೀರು ಸಂಪರ್ಕ ಪಡೆದು ಸರಬರಾಜು ಮಾಡುತ್ತಿದ್ದಾರೆ.ಮೀಟರ್ ಸಹ ಅಳವಡಿಸದೆ ಏಜೆನ್ಸಿಯವರು ನೀರು ಬಳಕೆ ಮಾಡುತ್ತಿದ್ದಾರೆ.ಸ್ವಚ್ಛತೆಗೂ ಸಹ ಕಾವೇರಿ ನೀರನ್ನೇ ಬಳಕೆ ಮಾಡಲಾಗುತ್ತಿದೆ.ಪ್ಲಾಂಟ್ ಕಮರ್ಷಿಯಲ್ ಆಗಿರುವುದರಿಂದ ಇದುವರೆಗೆ ಬಳಕೆಯಾದ ನೀರಿನ ಮೊತ್ತವನ್ನ ಏಜೆನ್ಸಿಯವರಿಂದ ವಸೂಲಿ ಮಾಡುವಂತೆ ಬಿ.ಎನ್.ನಾಗೇಂದ್ ಒತ್ತಾಯಿಸಿದ್ದಾರೆ.ಈ ಬಗ್ಗೆ ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ದೂರು ನೀಡಿದ ನಂತರವಷ್ಟೇ ಎಚ್ಚೆತ್ತ ಅಧಿಕಾರಿಗಳು ಘಟಕವನ್ನ ಸ್ವಚ್ಛಗೊಳಿಸಿದ್ದಾರೆ…