ಕೆ.ಆರ್.ಆಸ್ಪತ್ರೆ,ಬಾಲ ಮಂದಿರಕ್ಕೆ ಉಪಲೋಕಾಯುಕ್ತ ದಿಢೀರ್ ಭೇಟಿ… ಪರಿಶೀಲನೆ…

ಕೆ.ಆರ್.ಆಸ್ಪತ್ರೆ,ಬಾಲ ಮಂದಿರಕ್ಕೆ ಉಪಲೋಕಾಯುಕ್ತ ದಿಢೀರ್ ಭೇಟಿ… ಪರಿಶೀಲನೆ…

ಮೈಸೂರು,ಜೂ18,Tv10 ಕನ್ನಡ
ನಗರದ ಕೆ. ಆರ್. ಆಸ್ಪತ್ರೆ ಹಾಗೂ ಬಾಲಮಂದಿರಕ್ಕೆ ಉಪ ಲೋಕಾಯುಕ್ತರಾದ ಫಣೀಂದ್ರ ಅವರು ಮಧ್ಯಾಹ್ನ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು


ವಾರ್ಡ್ ಗಳು ಹಾಗೂ ಆಪರೇಷನ್ ಥಿಯೇಟರ್‌ಗಳು ಮತ್ತು ಇತರೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಔಷಧಗಳ ದಾಸ್ತಾನು ದಾಖಲಾತಿಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಆಸ್ಪತ್ರೆ ಆವರಣದಲ್ಲಿ ಶುಚಿತ್ವ ಇಲ್ಲದಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ವಹಿಸುವಂತೆ ತಿಳಿಸಿದರು.ಬಳಿಕ ರೋಗಿಗಳು ಹಾಗೂ ರೋಗಿಗಳ ಸಂಬಂಧಿಕರ ಕುಂದುಕೊರತೆಗಳ ಆಲಿಸಿದರು.

ಇದೇ ವೇಖೆ ಬಾಲಕೀಯರ ಬಾಲ ಮಂದಿರ
ನಂತರ ಮಹಿಳಾ ಮತ್ತು ಮಕ್ಕಳ ಇಲಾಖೆಯ ಬಾಲಕೀಯರ ಬಾಲ ಮಂದಿರ ಭೇಟಿ ನೀಡಿದ ಉಪ ಲೋಕಾಯುಕ್ತರು ಬಾಲಕಿಯರ ಮಂದಿರದಲ್ಲಿ ಉತ್ತಮವಾದ ವಾತಾವರಣ ನಿರ್ಮಾಣ ಮಾಡಬೇಕು.ಮಕ್ಕಳಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುವುದು, ಒಡೆಯುವುದು, ಗುಣಮಟ್ಟದ ಆಹಾರ ನೀಡವುದು, ಶೌಚಾಲಯದಲ್ಲಿ ಸ್ವಚ್ಚತೆ ಕಾಪಾಡುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿ ಅಗತ್ಯ ಕ್ರಮವಹಿಸಿದ ಬಗ್ಗೆ15 ದಿನದೊಳಗೆ ವರದಿ ನೀಡುವಂತೆ ಸೂಚಿಸಿದರು.

ಮಕ್ಕಳಿಗೆ ಬೇಕಾದ ಮೂಲ ಭೂತ ಸೌಕರ್ಯಗಳನ್ನು ನೀಡಬೇಕು. ಹಾಗೂ ಅವರಿಗೆ ಬೇಕಾದ ಆಟದ ಸಲಕರಣೆಗಳನ್ನು ನೀಡಲು ಅಗತ್ಯ ಕ್ರಮವಹಿಸಬೇಕು ಎಂದು ಅವರು ತಿಳಿಸಿದರು.
ನಗರದ ವಿಜಯ ನಗರ ನಾಲ್ಕನೇ ಹಂತದಲ್ಲಿರುವ ಬಾಲ ಮಂದಿರಕ್ಕೂ ಭೇಟಿ ನೀಡಿ ಮಕ್ಕಳಿಗೆ ಉತ್ತಮ ಆಹಾರ, ನೀರು ಹಾಗೂ ಮೂಲಭೂತ ಸೌಕರ್ಯ ನೀಡಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಲೋಕಾಯುಕ್ತ ಉಪ ನಿಬಂಧಕರಾದ ಚೆನ್ನಕೇಶವ ರೆಡ್ಜಿ, ಅಪರ ನಿಬಂಧಕರಾದ ಶಿವಕುಮಾರ್ ಬಿ ಹಾಗೂ ಅಪರ ಜಿಲ್ಲಾಧಿಕಾರಿಗಳಾದ ಕವಿತಾ ರಾಜರಾಂ ಹಾಗೂ ಅಧಿಕಾರಿಗಳು ಉಪಸ್ಧಿತರಿದ್ದರು…

Spread the love

Related post

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ.

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ.

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ. ಹನೂರು Tv10 ಕನ್ನಡ21/01/2026 ಹನೂರು :ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಯುವಕ ಚಿರತೆ ದಾಳಿಗೆ ಬಲಿಯಾದ…
ಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ನೀರುಪಾಲು…

ಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ನೀರುಪಾಲು…

ಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ನೀರುಪಾಲು… ಮಂಡ್ಯ,ಜ21,Tv10 ಕನ್ನಡಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ಕಾಲುಜಾರಿ ನೀರುಪಾಲಾದ ಘಟನೆ ಕೆ.ಆರ್.ಪೇಟೆ ತಾಲೂಕಿನ ಅಂಚೆಬೀರನಹಳ್ಳಿಯಲ್ಲಿ ನಡೆದಿದೆ.ಆನೆಗೋಳ ಗ್ರಾಮದ ರೈತ…
ಮೈಸೂರಿನಲ್ಲಿ ನಿಮ್ಹಾನ್ಸ್ ಮಾದರಿ ಸಂಸ್ಥೆ ಫಿಕ್ಸ್…ಜಮೀನು ವಶಕ್ಕೆ…ಮೈಸೂರು ಮೆಡಕಲ್ ಕಾಲೇಜಿಗೆ ಹಸ್ತಾಂತರ…

ಮೈಸೂರಿನಲ್ಲಿ ನಿಮ್ಹಾನ್ಸ್ ಮಾದರಿ ಸಂಸ್ಥೆ ಫಿಕ್ಸ್…ಜಮೀನು ವಶಕ್ಕೆ…ಮೈಸೂರು ಮೆಡಕಲ್ ಕಾಲೇಜಿಗೆ ಹಸ್ತಾಂತರ…

ಮೈಸೂರಿನಲ್ಲಿ ನಿಮ್ಹಾನ್ಸ್ ಮಾದರಿ ಸಂಸ್ಥೆ ಫಿಕ್ಸ್…ಜಮೀನು ವಶಕ್ಕೆ…ಮೈಸೂರು ಮೆಡಕಲ್ ಕಾಲೇಜಿಗೆ ಹಸ್ತಾಂತರ… ಮೈಸೂರು,ಜ19,Tv10 ಕನ್ನಡ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯನವರ ಮಹತ್ತರ ಯೋಜನೆಯ ನಿಮ್ಹಾನ್ಸ್ ಮಾದರಿಯ ಸಂಸ್ಥೆ ಸ್ಥಾಪನೆಗೆ ಗ್ರೀನ್…

Leave a Reply

Your email address will not be published. Required fields are marked *