ಉಚಿತ ಪ್ರಯಾಣ ಬಸ್ ನಲ್ಲಿ ಜಡೆ ಜಗಳ…ವಿಡಿಯೋ ವೈರಲ್…
- TV10 Kannada Exclusive
- June 20, 2023
- No Comment
- 148

ಉಚಿತ ಪ್ರಯಾಣ ಬಸ್ ನಲ್ಲಿ ಜಡೆ ಜಗಳ…ವಿಡಿಯೋ ವೈರಲ್…
ಮೈಸೂರು,ಜೂ20,Tv10 ಕನ್ನಡ
ಉಚಿತ ಬಸ್ ಪ್ರಯಾಣ ನಾರಿ ಶಕ್ತಿ ಯೋಜನೆ ಸರ್ಕಾರಕ್ಕೆ ಮುಜುಗರ ತರುವಂತೆ ಆಗಿದೆ. ಉಚಿತ ಬಸ್ ಪ್ರಯಾಣ ಮಾಡುವ ಹುಮ್ಮಸ್ಸಿನಲ್ಲಿ ನಾರಿಯರು ನಿಯಂತ್ರಣ ಕಳೆದುಕೊಳ್ಳುತ್ತಿದ್ದಾರೆ.ಒಂದೆಡೆ ನೂಕು ನುಗ್ಗಲಾದ್ರೆ ಮತ್ತಿಂದೆಡೆ ಸೀಟ್ ಗಾಗಿ ಮಹಿಳೆಯರು ಕೈ ಕೈ ಮಿಲಾಯಿಸುತ್ತಿದ್ದಾರೆ.ಬಸ್ ಒಂದರಲ್ಲಿ ಸೀಟ್ ಗಾಗಿ ಮಹಿಳೆಯರು ಜಡೆ ಹಿಡಿದು ಕಿತ್ತಾಡಿರುವ ವಿಡಿಯೋ ವೈರಲ್ ಆಗಿದೆ.
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.ಸರ್ಕಾರ ಕೂಡಲೇ ಈ ಸಮಸ್ಯೆಗೆ ಪರಿಹಾರ ಹುಡುಕದಿದ್ದಲ್ಲಿ ಅನಾಹುತ ನಡೆಯುವ ಸಂಭವವೂ ಇದೆ…