ಕೌಟುಂಬಿಕ ಕಲಹ… ಪತ್ನಿ,ಮಕ್ಕಳ ಮೇಲೆ ಪತಿಯಿಂದ ಹಲ್ಲೆ… ಇಬ್ಬರು ಮಕ್ಕಳು ಸಾವು…ಹೆಂಡತಿಗೆ ಗಂಭೀರ ಗಾಯ…
- CrimeTV10 Kannada Exclusive
- June 22, 2023
- No Comment
- 86



ಮಂಡ್ಯ,ಜೂ22,Tv10 ಕನ್ನಡ
ಕೌಟುಂಬಿಕ ಕಲಹ ಹಿನ್ನಲೆ ಪತಿರಾಯ ತನ್ನೆರಡು ಮಕ್ಕಳನ್ನು ಬರ್ಬರವಾಗಿ ಕೊಂದು ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮಂಡ್ಯ ಜಿಲ್ಲೆ
ಮರಳಗಾಲದಲ್ಲಿ ತಡರಾತ್ರಿ ನಡೆದಿದೆ.
ತೋಟದ ಮನೆಯಲ್ಲಿ ವಾಸವಿದ್ದ ಗುಲ್ಬರ್ಗಾ ಮೂಲದ ಕುಟುಂಬ.
ಘಟನೆಯಲ್ಲಿ ಆದರ್ಶ(04), ಅಮೂಲ್ಯ(03) ಧಾರುಣವಾಗಿ ಸಾವನ್ನಪ್ಪಿದ್ದಾರೆ.
ಸುತ್ತಿಗೆಯಿಂದ ಹೆಂಡತಿ ಲಕ್ಷ್ಮಿ(23) ಮಕ್ಕಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ ಗಾಯಗೊಂಡ ಲಕ್ಷ್ಮಿಯನ್ನ ಆಸ್ಪತ್ರೆಗೆ ರವಾನಿಸಲಾಗಿದೆ.ಪತಿ ಶ್ರೀಕಾಂತ್
ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ…