ವೃದ್ದೆಗೆ ವಿದ್ಯುತ್ ಬಿಲ್ ಶಾಕ್…80 ರೂ ನಿಂದ 1 ಲಕ್ಷಕ್ಕೆ ಏರಿದ ಬಿಲ್…
- CrimeMysore
- June 22, 2023
- No Comment
- 68

ವೃದ್ದೆಗೆ ವಿದ್ಯುತ್ ಬಿಲ್ ಶಾಕ್…80 ರೂ ನಿಂದ 1 ಲಕ್ಷಕ್ಕೆ ಏರಿದ ಬಿಲ್…

ಕೊಪ್ಪಳ,ಜೂ22,Tv10 ಕನ್ನಡ
ರಾಜ್ಯ ಸರ್ಕಾರದಿಂದ ಉಚಿತ ವಿಧ್ಯುತ್ ಫ್ರೀ ಘೋಷಣೆ ಆಗಿದೆ.ಇದರ ಜೊತೆಗೆ ವೃದ್ದೆಯೊಬ್ಬರಿಗೆ ಲಕ್ಷ ಲಕ್ಷ ವಿದ್ಯುತ್ ಬಿಲ್ ನೀಡಿದ ಜೆಸ್ಕಾಂ ಶಾಕ್ ನೀಡಿದೆ.ಕೊಪ್ಪಳ ಜಿಲ್ಲೆಯ ವೃದ್ದೆಗೆ ವಿದ್ಯುತ್ ಬಿಲ್ ಸಂಕಟ ತಂದಿದೆ.ಕೇವಲ ಎರಡೇ ಎರಡು ಲೈಟ್ ಉರಿಸಿದ್ರೂ ಲಕ್ಷ ಗಟ್ಟಲೆ ಬಿಲ್ ಬಂದಿದೆ.ಕೊಪ್ಪಳ ಜಿಲ್ಲೆಯ ಭಾಗ್ಯನಗರದ ವೃದ್ದೆ ಗಿರಿಜಮ್ಮ ರವರಿಗೆ ಇಂತಹ ಪರಿಸ್ಥಿತಿ ಬಂದಿದೆ.
ವಿದ್ಯುತ್ ಬಿಲ್ ನೋಡಿ ಶಾಕ್ ಆದ ಗಿರಿಜಮ್ಮ ಕಣ್ಣೀರಿಡುತ್ತಿದ್ದಾರೆ.
ಬರೋಬ್ಬರಿ 1,03,315 ರೂ ಬಿಲ್ ಕೊಟ್ಟ ಜೆಸ್ಕಾಂ ಅಘಾತ ನೀಡಿದೆ.ಗಿರಿಜಮ್ಮ ರವರಿಗೆ
ಭಾಗ್ಯ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು.ಪ್ರತಿ ಮಾಹೆ 70 ರಿಂದ 80 ರೂ ಬಿಲ್ ಬರುತ್ತಿತ್ತು.
ಹೊಸ ಮೀಟರ್ ಅಳವಡಿಸಿದ ಬಳಿಕ ಬಿಲ್ ಮೊತ್ತ ಲಕ್ಷಕ್ಕೆ ಏರಿದೆ.ಆರು ತಿಂಗಳ ಹಿಂದೆ ವೃದ್ದೆಯ ಮನೆಗೆ ಜೆಸ್ಕಾಂ ಸಿಬ್ಬಂದಿಗಖು ಮೀಟರ್ ಅಳವಡಿಸಿದ್ದರು.
6 ತಿಂಗಳಲ್ಲಿ ಬಿಲ್ ಮೊತ್ತ 1 ಲಕ್ಷ ದಾಟಿದೆ.
ಸಣ್ಣ ತಗಡಿನ ಶೆಡ್, ಎರಡೇ ಎರಡು ಲೈಟ್, ಮನೇಲಿ ಇರೋದು 90 ವಯಸ್ಸಿನ ಅಜ್ಜಿ.
ಒಂದೊತ್ತಿನ ಊಟಕ್ಕೆ ಪರದಾಡೋ ಅಜ್ಜಿಗೆ ಲಕ್ಷ ಬಿಲ್ ಬಂದಿದೆ.
ಜೆಸ್ಕಾಂ ಅಧಿಕಾರಿಗಳ ಎಡವಟ್ಟಿಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ…