ಮೈಸೂರಿನಲ್ಲಿ ರೌಡಿ ಪೆರೇಡ್…ಇಲ್ಲೀಗಲ್ ಆಕ್ಟಿವಿಟಿಯಲ್ಲಿ ಭಾಗಿಯಾದ್ರೆ ಹುಷಾರ್…ಎಸಿಪಿ ಶಾಂತಮಲ್ಲಪ್ಪ ಖಡಕ್ ವಾರ್ನಿಂಗ್…
- CrimeMysore
- June 25, 2023
- No Comment
- 117

ಮೈಸೂರಿನಲ್ಲಿ ರೌಡಿ ಪೆರೇಡ್…ಇಲ್ಲೀಗಲ್ ಆಕ್ಟಿವಿಟಿಯಲ್ಲಿ ಭಾಗಿಯಾದ್ರೆ ಹುಷಾರ್…ಎಸಿಪಿ ಶಾಂತಮಲ್ಲಪ್ಪ ಖಡಕ್ ವಾರ್ನಿಂಗ್…

ಮೈಸೂರು,ಜೂ25,Tv10 ಕನ್ನಡ
ಜೂನ್ 25 ಭಾನುವಾರ ಬೆಳ್ಳಂಬೆಳಗ್ಗೆ ಮೈಸೂರು ಖಾಕಿ ಪಡೆ ರೌಡಿಗಳಿಗೆ ಬಿಸಿ ಮುಟ್ಟಿಸಿದೆ.ದೇವರಾಜ ಉಪ ವಿಭಾಗದ ಆಲನಹಳ್ಳಿ ಪೊಲೀಸ್ ಠಾಣೆ ಆವರಣದಲ್ಲಿ ರೌಡಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಉದಯಗಿರಿ, ದೇವರಾಜ, ಲಷ್ಕರ್, ಅಲನಹಳ್ಳಿ, ನಜರ್ಬಾದ್ ಠಾಣೆಗಳ ಎಲ್ಲ ರೌಡಿ ಆಸಾಮಿಗಳನ್ನ ಕರೆಸಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು.ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು.ಸಮಾಜದಲ್ಲಿ ಶಾಂತಿಗೆ ಭಂಗ ತರುವ ಕೆಲಸ ಮಾಡಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಪರೇಡ್ ನಡೆಸಿದ ದೇವರಾಜ ವಿಭಾಗದ ಎಸಿಪಿ ಶಾಂತಮಲ್ಲಪ್ಪ., ನೂತನ ಗೃಹ ಸಚಿವರಾದ ಡಾ||ಜಿ ಪರಮೇಶ್ವರ ರವರ ಹಾಗೂ ನೂತನ ಡಿಜಿ & ಐ ಜಿ ಪಿ ಶ್ರೀ ಅಲೋಕ್ ಮೋಹನ್ ರವರ ಆದೇಶ ದಂತೆ ಇಂದು ದೇವರಾಜ ಉಪವಿಭಾಗದ ವತಿಯಿಂದ ರೌಡಿಪೆರೇಡ್ ನಡೆಸಲಾಗಿದೆ. ಎಸಿಪಿ ಶಾಂತಮಲ್ಲಪ್ಪ ರವರು ಮಾತನಾಡಿ ಯಾವುದೇ ಕಾನೂನು ಬಾಹಿರ ಚಟುವಟಿಕೆ ಗಳಲ್ಲಿ ಭಾಗಿಯಾಗದಂತೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.ಹಾಗಗೊಂದು ವೇಳೆ ಭಾಗಿಯಾದಲ್ಲಿ ಗೂಂಡಾ ಕಾಯ್ದೆ ಯಂತಹ ಕಾನೂನು ಬಳಸಿ ಹತ್ತಿಕ್ಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಎಲ್ಲರೂ ಸನ್ನಡತೆ ಯಿಂದ ಇರುವಂತೆ ಸೂಚಿಸಿ ಎಚ್ಚರಿಕೆ ನೀಡಿದ್ದಾರೆ

ಈ ಸಂದರ್ಭದಲ್ಲಿ ಪೊಲೀಸ್ ಇನ್ಸ್ ಪೆಕ್ಟ್ ರ್ ಗಳಾದ ಪಿ ಪಿ ಸಂತೋಷ್, ಜೀವನ್, ಪಿ. ಕೆ. ರಾಜು, ಟಿ ಬಿ ಶಿವಕುಮಾರ್ ಹಾಗೂ ವಿಭಾಗದ ಎಲ್ಲ ಪಿ ಎಸ್ ಐ ಗಳು ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳು ಹಾಜರಿದ್ದರು…