ಕೆ.ಆರ್.ಆಸ್ಪತ್ರೆ,ಚೆಲುವಾಂಬ ಆಸ್ಪತ್ರೆ,ಬಾಲಕ ಹಾಗೂ ಬಾಲಕಿಯರ ಮಂದಿರದ ಕರ್ಮಕಾಂಡ ಬಯಲು ಮಾಡಿದ ಉಪಲೋಕಾಯುಕ್ತ…ಅಧಿಕಾರಿಗಳ ವಿರುದ್ದ ಸ್ವಯಂಪ್ರೇರಿತ ದೂರು ದಾಖಲಿಸುವಂತೆ ಆದೇಶ…
- MysoreTV10 Kannada Exclusive
- June 28, 2023
- No Comment
- 91
ಕೆ.ಆರ್.ಆಸ್ಪತ್ರೆ,ಚೆಲುವಾಂಬ ಆಸ್ಪತ್ರೆ,ಬಾಲಕ ಹಾಗೂ ಬಾಲಕಿಯರ ಮಂದಿರದ ಕರ್ಮಕಾಂಡ ಬಯಲು ಮಾಡಿದ ಉಪಲೋಕಾಯುಕ್ತ…ಅಧಿಕಾರಿಗಳ ವಿರುದ್ದ ಸ್ವಯಂಪ್ರೇರಿತ ದೂರು ದಾಖಲಿಸುವಂತೆ ಆದೇಶ…
ಮೈಸೂರು,ಜೂ28,Tv10 ಕನ್ನಡ
ಮೈಸೂರಿನ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಕೆ.ಆರ್.ಆಸ್ಪತ್ರೆ,ಚೆಲುವಾಂಬ ಆಸ್ಪತ್ರೆ ಹಾಗೂ ಬಾಲಕ,ಬಾಲಕಿಯರ ಮಂದಿರಗಳ ಕರ್ಮಕಾಂಡವನ್ನ ಉಪಲೋಕಾಯುಕ್ತ ಕೆ.ಆರ್.ಫಣೀಂದ್ರ ರವರು ಅಕ್ಷರಸಃ ಬಯಲು ಮಾಡಿದ್ದಾರೆ.ಸಂಭಂಧ ಪಟ್ಟ ಎಲ್ಲಾ ಅಧಿಕಾರಿಗಳ ಮೇಲೆ ಸ್ವಯಂಪ್ರೇರಿತರಾಗಿ ದೂರು ದಾಖಲಿಸಿ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಕಚೇರಿಯ ಕಾನೂನು ಸಲಹೆ ವಿಭಾಗಕ್ಕೆ ಆದೇಶಿಸಿದ್ದಾರೆ.ನಿಗದಿತ ಅವಧಿಯಲ್ಲಿ ಅಧಿಕಾರಿಗಳಿಂದ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.ಸಾರ್ವಜನಿಕರ ಅಹವಾಲಿಗೆ ಸ್ಪಂದಿಸಿರುವ ಉಪಲೋಕಾಯುಕ್ತರು ಅಧಿಕಾರಿಗಳಿಗೆ ಛಾಟಿ ಬೀಸಿದ್ದಾರೆ.
ಜೂನ್ 17 ರಂದು ಉಪಲೋಕಾಯುಕ್ತರಾದ ಫಣೀಂದ್ರ ರವರು ಮೈಸೂರಿಗೆ ಮೂರು ದಿನಗಳ ಭೇಟಿ ನೀಡಿದ್ದರು.ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಇದೇ ವೇಳೆ ಲೋಕಾಯುಕ್ತರು ಕೆ.ಆರ್.ಆಸ್ಪತ್ರೆ,ಚೆಲುವಾಂಬ ಆಸ್ಪತ್ರೆ,ಬಾಲಕಿಯರ ಮಂದಿರ ಹಾಗೂ ಬಾಲಕರ ಮಂದಿರಕ್ಕೂ ಧಿಢೀರ್ ಭೇಟಿ ನೀಡಿದ್ದರು. ಭೇಟಿ ವೇಳೆ ಕಂಡುಬಂದ ಅವ್ಯವಸ್ಥೆ,ಉದಾಸೀನತೆ,ಬೇಜವಾಬ್ದಾರಿ,ಸೂಕ್ತ ನಿರ್ವಹಣೆಯಲ್ಲಿ ವಿಫಲತೆ ಬಗ್ಗೆ ವೀಕ್ಷಿಸಿದ್ದರು.ಆಸ್ಪತ್ರೆಗಳಲ್ಲಿ ರೋಗಿಗಳ ಪರದಾಟಗಳನ್ನ ಕಣ್ಣಾರೆ ಕಂಡಿದ್ದರು.ಓಷಧಿಗಳ ಕೊರತೆ,ಸಿಬ್ಬಂದಿಗಳ ದುರ್ವರ್ತನೆ,ಅವ್ಯವಸ್ಥೆಗಳನ್ನ ಸವಿವರವಾಗಿ ಪಟ್ಟಿಮಾಡಿದ್ದರು.
ಬಾಲಕ ಹಾಗೂ ಬಾಲಕಿಯರ ಮಂದಿರದಲ್ಲೂ ಸಹ ಇಂತಹ ದೃಶ್ಯಗಳೇ ಕಂಡು ಬಂದಿತ್ತು.ಗುಣಮಟ್ಟದ ಆಹಾರ ಮತ್ತು ಬಟ್ಟೆ ನೀಡದಿರುವುದು,ಹುಳಮಿಶ್ರಿತ ಪದಾರ್ಥಗಳನ್ನ ಬಳಸುತ್ತಿರುವುದು ಸೇರಿದಂತೆ ಹಲವಾರು ಅಂಶಗಳು ಉಪಲೋಕಾಯುಕ್ತರ ಮನಸ್ಸಿಗೆ ನಾಟಿತ್ತು.ಎಲ್ಲಾ ಕರ್ಮಕಾಂಡಗಳನ್ನ ಪಟ್ಟಿ ಮಾಡಿದ ಉಪಲೋಕಾಯುಕ್ತರು ಪ್ರಧಾನ ಕಚೇರಿಗೆ ಪತ್ರ ಬರೆದು ಜವಾಬ್ದಾರಿಯುತ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ…