ಲೋಕಾಯುಕ್ತ ದಾಳಿ ಪ್ರಕರಣ…ಎಫ್.ಡಿ.ಎ.ಮನೆಯಲ್ಲಿ ದೊರೆತಿದ್ದು 14 ಲಕ್ಷ ಕ್ಯಾಷ್…ಅರ್ಧ ಕೆಜಿ ಚಿನ್ನ…ಎರಡು ನಿವೇಶನ ದಾಖಲೆ…
- CrimeTV10 Kannada Exclusive
- June 28, 2023
- No Comment
- 79
ಮಡಿಕೇರಿ,ಜೂ28,Tv10 ಕನ್ನಡ
ಕೊಡಗು ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಪ್ರಥಮ ದರ್ಜೆ ಸಹಾಯಕನ ಮನೆಯಲ್ಲಿ ಲೋಕಾಯುಕ್ತರಿಗೆ ದೊರೆತಿದ್ದು ಬರೋಬರಿ 14 ಲಕ್ಷ ಕ್ಯಾಶ್,ಅರ್ಧ ಕೆ.ಜಿ.ಚಿನ್ನ,ಎರಡು ನಿವೇಶನಗಳ ದಾಖಲೆ.
ಅಕ್ರಮ ಆಸ್ತಿ ಹೊಂದಿರುವ ದೂರಿನ ಹಿನ್ನಲೆ ಲೋಕಾಯುಕ್ತ ಅಧಿಕಾರಿಗಳು ಎಫ್.ಡಿ.ಎ.ಅಬ್ದುಲ್ ಬಷೀರ್ ಮನೆ ಮೇಲೆ ದಾಳಿ ನಡೆಸಿದ್ದರು.ಸಂಪೂರ್ಣ ಪರಿಶೀಲನೆ ವೇಳೆ ಅಪಾರ ಮೊತ್ತದ ಹಣ ಹಾಗೂ ಚಿನ್ನಾಭರಣ ದೊರೆತಿದೆ. ಮೈಸೂರು
ಲೋಕಾಯುಕ್ತ ಎಸ್ಪಿ ಸುರೇಶ ಬಾಬು ನೇತೃತ್ವದಲ್ಲಿ ಮಡಿಕೇರಿ ಲೋಕಾಯುಕ್ತ ಡಿವೈಎಸ್ಪಿ ಪವನ್ ಇನ್ಸ್ಪೆಕ್ಟರ್ ಲೋಕೇಶ್ ಹಾಗೂ ಮಡಿಕೇರಿ ಲೋಕಾಯುಕ್ತ ಸಿಬ್ಬಂದಿಗಳಾದ ಮಂಜು, ದೀಪಿಕಾ, ಸಲಾವುದ್ದಿನ್, ಅರುಣ್, ಪೃತ್ವಿಷ್ ಲೋಹಿತ್, ಶಶಿಕುಮಾರ್ ಮತ್ತು
ಮೈಸೂರು ಲೋಕಾಯುಕ್ತ ಠಾಣೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಮೈಸೂರು ಲೋಕಾಯುಕ್ತ ಡಿವೈಎಸ್ಪಿ ಕೃಷ್ಣಯ್ಯ. ವಿ
ಲೋಕಾಯುಕ್ತ ಹಾಗೂ ಠಾಣೆಯ ಪೊಲೀಸ್ ನಿರೀಕ್ಷಕರಾದ ರವಿಕುಮಾರ್, ಉಮೇಶ್ ಹಾಗೂ ಮೈಸೂರು ಲೋಕಾಯುಕ್ತ ಕಚೇರಿ ಸಿಬ್ಬಂದಿಗಳಾದ
ಲೋಕೇಶ್, ಪ್ರಕಾಶ್, ನೇತ್ರಾವತಿ, ತ್ರಿವೇಣಿ, ಆಶಾ, ಚಾಲಕರುಗಳಾದ ಮೋಹನ್, ದಿನೇಶ್ ರವರು ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಾರೆ.