ಹುಲಿ ಜೊತೆ ಕಾದಾಡಿ ಸಾವನ್ನಪ್ಪಿದ ಚಿರತೆ…ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಅಂತ್ಯಕ್ರಿಯೆ…
- TV10 Kannada Exclusive
- June 30, 2023
- No Comment
- 72
ಮೈಸೂರು,ಜೂ30,Tv10 ಕನ್ನಡ
ಹುಲಿ ಜೊತೆ ಕಾದಾಡಿ ಸಾವನ್ನಪ್ಪಿದ ಚಿರತೆಯ ಅಂತ್ಯಕ್ರಿಯೆಯನ್ನ ಇಂದು ನೆರವೇರಿಸಲಾಯಿತು.ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ದೊಡ್ಡಹಳ್ಳ ಗಸ್ತಿನ ರಸ್ತೆ ಬಳಿ ಚಿರತೆ ಕಳೇಬರ ಪತ್ತೆಯಾಗಿತ್ತು.ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಹಾಗೂ ಪಶುವೈದ್ಯಾಧಿಕಾರಿಗಳು ಪರಿಶೀಲನೆ ನಡೆಸಿ ಹುಲಿ ಕಾದಾಟದಿಂದ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದರು.ಇಂದು ಅರಣ್ಯಾಧಿಕಾರಿಗಳಾದ ಹರ್ಷಕುಮಾರ್ ಚಿಕ್ಕನರಗುಂದ,ಕೆ.ಎನ್.ಮಾದಪ್ಪ,ಡಾ.ಕೆ.ಸಿ ತಿಮ್ಮಯ್ಯ,ಕೆ.ಪಿ.ಗೋಪಾಲ್,ಪಶುವೈಧ್ಯಾಧಿಕಾರಿಗಳಾದ ಡಾ.ರಮೇಶ್,ಡಾ.ಚಂದ್ರಶೇಖರ್ ಸಮ್ಮುಖದಲ್ಲಿ ಚಿರತೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ…