20 ಕೆಜಿ ಗಾಂಜಾ ಸಮೇತ ಸಿಕ್ಕಿಬಿದ್ದ ಆರೋಪಿಗೆ 10 ವರ್ಷ ಶಿಕ್ಷೆ…ಮೈಸೂರು ನ್ಯಾಯಾಲಯದ ತೀರ್ಪು…
- CrimeMysore
- July 7, 2023
- No Comment
- 119
ಮೈಸೂರು,ಜು7,Tv10 ಕನ್ನಡ
ಆಂಧ್ರ ಪ್ರದೇಶ ದಿಂದ ಅಕ್ರಮವಾಗಿ 20 ಕೆಜಿ ಗಾಂಜಾ ತಂದು ಮೈಸೂರಿನ ಉದಯಗಿರಿ ಠಾಣೆ ವ್ಯಾಪ್ತಿಯ ಶಾಂತಿನಗರ ದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗೆ ಮೈಸೂರು ನ್ಯಾಯಾಲಯ 10 ವರ್ಷ ಶಿಕ್ಷೆ ವಿಧಿಸಿದೆ. ಬೆನೋತ್ ವೆಂಕಣ್ಣ ಎಂಬಾತ ಶಿಕ್ಷೆಗೆ ಒಳಗಾದ ಅಪರಾಧಿ. ಮೈಸೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ತೀರ್ಪು ಪ್ರಕಟವಾಗಿದೆ.
ದಿನಾಂಕ 7-1-2021 ರಂದು ಉದಯಗಿರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎನ್ ಎಂ ಪೂಣಚ್ಚ ರವರು ಗಸ್ತಿನಲ್ಲಿದ್ದಾಗ ಬೆನೋತ್ ವೆಂಕಣ್ಣ ಎಂಬ ಆಂಧ್ರ ಮೂಲದ ವ್ಯಕ್ತಿ ಒಂದು ಕಪ್ಪು ಸೂಟ್ ಕೇಸ್ ನಲ್ಲಿ ಸುಮಾರು 20 ಕೆಜಿ ಗಾಂಜಾ ಮಾದಕ ವಸ್ತುವನ್ನು ತುಂಬಿಕೊಂಡು ಮೈಸೂರಿನ ವ್ಯಕ್ತಿಗೆ ಹಣಕ್ಕಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವಿಚಾರ ಬಾತ್ಮಿದಾರರಿಂದ ತಿಳಿದು ದಾಳಿ ಮಾಡಿ ಆತನನ್ನು ವಶಕ್ಕೆ ಪಡೆದು ಪರಿಶೀಲನೆ ಮಾಡಿದಾಗ ಆತನ ಬಳಿ ಸುಮಾರು 20 ಕೆಜಿ ಮಾದಕ ವಸ್ತು ಗಾಂಜಾ ಇರುವುದು ದೃಢಪಟ್ಟಿದೆ. ಆರೋಪಿಯನ್ನು ದಸ್ತಗಿರಿ ಮಾಡಿ ಗಾಂಜಾವನ್ನು ಅಮಾನತ್ತು ಪಡಿಸಿಕೊಂಡಿದ್ದರು . ನಂತರ ಪ್ರಕರಣದ ತನಿಖೆಯನ್ನು ಕೈಗೊಂಡ ಠಾಣೆಯ ಪಿ ಎಸ್ ಐ ಜೈಕೀರ್ತಿ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ಎನ್ ಎಂ ಪೂಣಚ್ಚ ರವರುಗಳು ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷರೋಪಣ ಪತ್ರ ವನ್ನು ಸಲ್ಲಿಸಿದ್ದರು. ತನಿಖಾ ಸಹಾಯಕರಾಗಿ ಸಿಪಿಸಿ ಆರ್ ಎಸ್ ಕೃಷ್ಣ ಕಾರ್ಯ ನಿರ್ವಹಿಸಿದ್ದರು.
ನ್ಯಾಯಾಲಯ ದ SPL C NO 155/21ರಲ್ಲಿ ವಿಚಾರಣೆ ನಡೆಸಿದ ಎನ್ ಡಿ ಪಿ ಎಸ್ ಕೇಸುಗಳ ವಿಶೇಷ ನ್ಯಾಯಾಲಯ ವಾಗಿರುವ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಜಿ ಎಸ್ ಸಂಗ್ರೇಶಿ ರವರು ಈ ದಿನ ದಿನಾಂಕ ಇಂದು ರಂದು ತೀರ್ಪು ಪ್ರಕಟಿಸಿದ್ದು ಆರೋಪಿ ಬೆನೋತ್ ವೆಂಕಣ್ಣ ನಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ ದಂಡ ವಿಧಿಸಿ ಅದೇಶಿಸಿದ್ದಾರೆ. ಸರ್ಕಾರದ ಪರವಾಗಿ ಶ್ರೀ ಚಿನ್ನಪ್ಪ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದರು…