ಮಹಿಳೆಯರನ್ನ ಮದುವೆಯಾಗಿ ಚಿನ್ನಾಭರಣಗಳ ಜೊತೆ ಎಸ್ಕೇಪ್ ಆಗುತ್ತಿದ್ದ ಖತರ್ ನಾಕ್ ಬಂಧನ…ಆಂಟಿಯರೇ ಇವನ ಟಾರ್ಗೆಟ್…ಹೆಡೆಮುರಿ ಕಟ್ಟಿದ ಕುವೆಂಪುನಗರ ಠಾಣಾ ಪೊಲೀಸರು…
- CrimeMysore
- July 8, 2023
- No Comment
- 185
ಮೈಸೂರು,ಜು8,Tv10 ಕನ್ನಡ
ಮಧ್ಯವಯಸ್ಸಿನ ಹಾಗೂ ವಿಧವಾ ಮಹಿಳೆಯರನ್ನ ನಂಬಿಸಿ ಮದುವೆಯಾಗಿ ನಗದು ಹಾಗೂ ಚಿನ್ನಾಭರಣಗಳೊಂದಿಗೆ ಎಸ್ಕೇಪ್ ಆಗುತ್ತಿಸ್ದ ಖತರ್ ನಾಕ್ ಆರೋಪಿಯನ್ನ ಬಂಧಿಸುವಲ್ಲಿ ಕುವೆಂಪುನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.ಬೆಂಗಳೂರಿನ ಬನಶಂಕರಿ ಬಡಾವಣೆ ನಿವಾಸಿ ಮಹೇಶ್ (35) ಬಂಧಿತ ಆರೋಪಿ.ಈತನಿಂದ 2 ಲಕ್ಷ ನಗದು,2 ಕಾರ್,ಒಂದು ಬ್ರೇಸ್ ಲೈಟ್,ಒಂದು ಉಂಗುರ,ಎರಡು ಚಿನ್ನದ ಬಳೆ,ಒಂದು ನೆಕ್ಲೆಸ್ ಹಾಗೂ 7 ಮೊಬೈಲ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.
ಮೈಸೂರಿನ ನಿವಾಸಿ ಹೇಮಲತಾ ಎಂಬುವರಿಗೆ ತಾನು ಡಾಕ್ಟರ್ ಎಂದು ಹೇಳಿಕೊಂಡು ಶಾದಿ ಡಾ.ಕಾಂ ನಲ್ಲಿ ಪರಿಚಯಿಸಿಕೊಂಡು ನಂಬಿಸಿ ನಂತರ ಮದುವೆಯಾಗಿ ನಗದು ಹಾಗೂ ಚಿನ್ನಾಭರಣಗಳೊಂದಿಗೆ ಎಸ್ಕೇಪ್ ಆಗಿದ್ದ.ಹೇಮಲತಾ ರವರು ಕುವೆಂಪುನಗರ ಪೊಲೀಸರಿಗೆ ದೂರು ದಾಖಲಿಸಿದ್ದು ಈತನನ್ನ ಇಂದು ಬಂಧಿಸಿದ್ದಾರೆ.ವಿಚಾರಣೆ ವೇಳೆ ಈತ ತಾನು ಡಾಕ್ಟರ್,ಇಂಜಿನಿಯರ್,ಸಿವಿಲ್ ಕಂಟ್ರಾಕ್ಟರ್ ಎಂದು ಹೇಳಿಕೊಂಡು ಸುಮಾರು 15 ಮಹಿಳೆಯರಿಗೆ ದೋಖಾ ಮಾಡಿರುವುದು ಬೆಳಕಿಗೆ ಬಂದಿದೆ.
ಶಾಧಿ.ಡಾ.ಕಾಂ ಮೂಲಕ ಹೇಮಲತಾ ರವರನ್ನ ಕಾಂಟ್ಯಾಕ್ಟ್ ಮಾಡಿದ ಮಹೇಶ್ ಮೈಸೂರಿನ ವಿಜಯನಗರದಲ್ಲಿರುವ ಮನೆ ತೋರಿಸಿ ನಂಬಿಸಿದ್ದಾನೆ.ಈತನ ಬೋಗಸ್ ಮಾತುಗಳನ್ನ ನಂಬಿದ ಹೇಮಲತಾ ಜನವರಿ1,2023 ರಲ್ಲಿ ವಿಶಾಖಪಟ್ನಂ ನಲ್ಲಿ ಮದುವೆಯಾಗಿದ್ದಾರೆ.ನಂತರ ಮೈಸೂರಿನ ಮನೆಗೆ ಬಂದು ನೆಲೆಸಿದ್ದಾರೆ.ತಾನು ಕ್ಲಿನಿಕ್ ಓಪನ್ ಮಾಡಬೇಕು ಎಂದು ಕಾರಣ ನೀಡಿ 70 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದಾನೆ.ಹಣ ಕೊಡಲು ಹೇಮಲತಾ ಒಪ್ಪದೇ ಇದ್ದಾಗ ಕೊಲೆ ಬೆದರಿಕೆ ಹಾಕಿದ್ದಾನೆ.ನಂತರ ಹೇಮಲತಾ ಮನೆಯಲ್ಲಿ ಇಲ್ಲದಿರುವ ಸಮಯ ನೋಡಿಕೊಂಡು 15 ಲಕ್ಷ ಕ್ಯಾಶ್ ಹಾಗೂ ಒಡವೆಗಳೊಂದಿಗೆ ಪರಾರಿಯಾಗಿದ್ದಾನೆ.ನಂತರ ಈತ ಮನೆಗೆ ಹಿಂದಿರುಗಿಲ್ಲ.ಕೆಲವೇ ದಿನಗಳಲ್ಲಿ ಬೆಂಗಳೂರಿನ ದಿವ್ಯಾ ಎಂಬುವರು ಹೇಮಲತಾ ರವರನ್ನ ಸಂಪರ್ಕಿಸಿ ತನನ್ನೂ ಮದುವೆ ಆಗಿದ್ದಾರೆಂದು ಮಾಹಿತಿ ತಿಳಿಸಿದ್ದಾರೆ.ಮಹೇಶ್ ವಂಚನೆಗೆ ಬೇಸತ್ತ ಹೇಮಲತಾ ನ್ಯಾಯಕ್ಕಾಗಿ ಕುವೆಂಪುನಗರ ಪೊಲೀಸರ ಮೊರೆ ಹೋಗಿದ್ದಾರೆ.ದೂರು ದಾಖಲಿಸಿಕೊಂಡ ಠಾಣೆ ಇನ್ಸ್ಪೆಕ್ಟರ್ ಅರುಣ್ ರವರು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ಹಾಗೂ ಕೆ.ಆರ್.ವಿಭಾಗದ ಎಸಿಪಿ ಗಂಗಾಧರ ಸ್ವಾಮಿ ಉಸ್ತುವಾರಿಯಲ್ಲಿ ವಿಶೇಷ ತಂಡ ರಚಿಸಿದ್ದಾರೆ.ಮಹಿಳೆಯರನ್ನ ಏಮಾರಿಸಿ ವಂಚಿಸುತ್ತಿದ್ದ ಖತರ್ ನಾಕ್ ಮಹೇಶ್ ಹೆಡೆಮುರಿ ಕಟ್ಟಿದ್ದಾರೆ.
ಮಹೇಶ್ ಬಂಧನದ ಕಾರ್ಯಾಚರಣೆಯಲ್ಲಿ ಕುವೆಂಪುನಗರ ಠಾಣೆಯ ಎಸ್ಸೈ ಗಳಾದ ಕು.ರಾಧಾ,ಗೋಪಾಲ್,ಎಎಸ್ಸೈ ನಂಜುಂಡಸ್ವಾಮಿ,ಹೆಚ್.ಸಿ.ಗಳಾದ ಮಂಜುನಾಥ್,ಆನಂದ್,ನಾಗೇಶ್ ಹಾಗೂ ಪಿಸಿ ಗಳಾದ ಪುಟ್ಟಪ್ಪ,ಹಜರತ್,ಸುರೇಶ್,ಕುಮಾರ್ ರವರು ಭಾಗಿಯಾಗಿ ಯಶಸ್ವಿಗೊಳಿಸಿದ್ದಾರೆ…
ಪತ್ತೆ ಕಾರ್ಯವನ್ನ ನಗರ ಪೊಲೀಸ್ ಆಯುಕ್ತರಾದ ಡಾ.ಬಿ.ರಮೇಶ್,ಸಂಚಾರ ಹಾಗೂ ಅಪರಾಧ ವಿಭಾಗದ ಡಿಸಿಪಿ ಜಾಹ್ನವಿ ರವರು ಪ್ರಶಂಸಿಸಿರುತ್ತಾರೆ.