ಜೈನಮುನಿ ಸ್ವಾಮೀಜಿಗೆ ಭಾವಪೂರ್ಣ ನಮನ…ಸಾಧುಗಳಿಗೆ ಸರ್ಕಾರ ರಕ್ಷಣೆ ನೀಡಯವಂತೆ ಒತ್ತಾಯ…

ಜೈನಮುನಿ ಸ್ವಾಮೀಜಿಗೆ ಭಾವಪೂರ್ಣ ನಮನ…ಸಾಧುಗಳಿಗೆ ಸರ್ಕಾರ ರಕ್ಷಣೆ ನೀಡಯವಂತೆ ಒತ್ತಾಯ…

ಮೈಸೂರು,ಜು11,Tv10 ಕನ್ನಡ
ಬೆಳಗಾಂನಲ್ಲಿ ಕಿಡಿಗೇಡಿಗಳಿಂದ ಕ್ರೂರ ಹತ್ಯೆಗೊಳಗಾದ ಜೈನಮುನಿ ಕಾಮಕುಮಾರ ನಂದಿ‌ ಸ್ವಾಮೀಜಿ ಮಹಾರಾಜ ಶ್ರೀಗಳಿಗೆ ಮೈಸೂರಿನ ಜೆ.ಎಲ್.ಬಿ.ರಸ್ತೆಯಲ್ಲಿರುವ ಭ್ರಾಹ್ಮಣ ವಿಧ್ಯಾರ್ಥಿ ನಿಲಯದಲ್ಲಿ ಅಪೂರ್ವ ಸ್ನೇಹ ಬಳಗದ ವತಿಯಿಂದ ಸಂತಾಪ ಸಭೆ ಹಮ್ಮಿಕೊಳ್ಳಲಾಗಿತ್ತು. ಭಾವಪೂರ್ಣ ನಮನ ಸಲ್ಲಿಸಿ ಶೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಇಳೈ ಆಳ್ವಾರ್ ಸ್ವಾಮೀಜಿ ರವರು ಮುನಿಗಳ ಹತ್ಯೆ ಮಾಡಿದವರಿಗೆ ಸರ್ಕಾರ ಕಾನೂನಾತ್ಮಕವಾಗಿ ಕಠಿಣ ಶಿಕ್ಷೆ ವಿಧಿಸಬೇಕು. ಇಂತಹ ಕೃತ್ಯಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಹಾಗೂ ಸಾಧು ಸಂತರಿಗೆ ಸರ್ಕಾರ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.

ನಗರಪಾಲಿಕೆ ಸದಸ್ಯರಾದ ಮಾ.ವಿ. ರಾಮ್ ಪ್ರಸಾದ್ ಮಾತನಾಡಿ
ಜೈನ ಸಮಾಜ ಶಾಂತಿ ಪ್ರಿಯ ಸಮಾಜ. ಅಹಿಂಸಾ ಮಾರ್ಗ ಸಮಾಜದ ಮೂಲಮಂತ್ರ. ಆದರೆ ಮುನಿಗಳನ್ನು ಕರೆಂಟ್ ಶಾಕ್ ನೀಡಿ, ಕೊಲೆ ಮಾಡಿ, ಮೃತ ದೇಹವನ್ನು ಬೋರವೆಲ್‍ನಲ್ಲಿ ತುಂಡರಿಸಿ ತುಂಬಿದ್ದಾರೆ. ಇದು ಅತ್ಯಂತ ಅಮಾನೀಯ ಘಟನೆ. ಸದಾ ಸಮಾಜದ ಒಳಿತಿಗೆ ಶ್ರಮಿಸುವ ಜೈನ ಸಮಾಜದ ಮುನಿಗಳ ಹತ್ಯೆ ಆಗಿರುವುದು ಖಂಡನೀಯ. ರಾಜ್ಯ ಸರ್ಕಾರ ಮಠಾಧೀಶರಿಗೆ ಮುನಿಗಳಿಗೆ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.

ಸಂತಾಪ ಸಭೆಯಲ್ಲಿ ಅಪೂರ್ವ ಸುರೇಶ್ , ಒಕ್ಕಲಿಗ ಸಂಘದ ಮಾಜಿ ನಿರ್ದೇಶಕರಾದ ಮೈ ಲಾ ವಿಜಯ್ ಕುಮಾರ್,
ಜೈನ ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಕಾರ್ಯದರ್ಶಿ ಶಮಾನಂದ್ ಸಾಗರ್ , ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ,
ಉದ್ಯಮಿ ಜಯರಾಮ್, ಧರ್ಮರಾಜ್, ನಾಗೇಶ್, ಸಂದೀಪ್ ಚಂದ್ರಶೇಖರ್, ಎಸ್ ಎನ್ ರಾಜೇಶ್, ಚಿನ್ನ ಬೆಳ್ಳಿ ವ್ಯಾಪಾರ ನೌಕರರ ಸಂಘದ ಅಧ್ಯಕ್ಷರಾದ ಸುರೇಶ್ ಗೋಲ್ಡ್, ಬೈರತಿ ಲಿಂಗರಾಜು, ಸುಚೇಂದ್ರ,ಧರ್ಮೇಂದ್ರ, ಬಸವರಾಜು, ರಾಮಚಂದ್ರ ಹಾಗೂ ಇನ್ನಿತರರು ಭಾಗವಹಿಸಿದರು..

Spread the love

Related post

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…
ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ… ಮೈಸೂರು,ಸೆ10,Tv10 ಕನ್ನಡ ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ ನಡೆದಿದೆ.ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ…
ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ… ಮೈಸೂರು,ಸೆ6,Tv10 ಕನ್ನಡ ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವ್ಯಕ್ತಿಗೆ ಕಬ್ಬಿಣದ ರಾಡು ಚುಚ್ಚಿ ಸ್ಥಳದಲ್ಲೇ…

Leave a Reply

Your email address will not be published. Required fields are marked *