ಪೇಪರ್ ಬಟ್ಟೆ ಚೀಲಗಳನ್ನು ಬಳುಸುವುದರಿಂದ ಪರಿಸರ ರಕ್ಷಣೆ ಮಾಡಲು ಸಾದ್ಯ -ಲಯನ್ ಎನ್ . ಜಯಪ್ರಕಾಶ್ ಕರೆ**
- TV10 Kannada Exclusive
- July 12, 2023
- No Comment
- 85
ಪೇಪರ್ ಬಟ್ಟೆ ಚೀಲಗಳನ್ನು ಬಳುಸುವುದರಿಂದ ಪರಿಸರ ರಕ್ಷಣೆ ಮಾಡಲು ಸಾದ್ಯ -ಲಯನ್ ಎನ್ . ಜಯಪ್ರಕಾಶ್ ಕರೆ**
ಭೂಮಿಯ ಪರಿಸರದಲ್ಲಿ ಪ್ಲಾಸ್ಟಿಕ್ ವಸ್ತುಗಳು ಮತ್ತು ಕಣಗಳು ಅಂದರೆ ಪ್ಲಾಸ್ಟಿಕ್ ಬಾಟಲಿಗಚಳು ಚೀಲಗಳು ಶೇಖರಣೆಯಾಗಿ ಅದು ಮಾನವರು , ವನ್ಯ ಜೀವಿಗಳು ಮತ್ತು ಅವುಗಳ ಅವಾಸಸ್ಥಾನದ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಇಡೀ ಪರಿಸರವನ್ನು ಪ್ಲಾಸ್ಟಿಕ್ ನಾಶ ಮಾಡುವ ಸಾಧ್ಯತೆ ಇದೆ ಎಂದು ಲಯನ್ಸ್ ಅಂತರಾಷ್ಟ್ರೀಯ 317 ಜಿ ನ ಪ್ಲಾಸ್ಟಿಕ್ ತ್ಯಾಜ್ಯ ನಿರ್ಮೂಲನೆಯ ಜಿಲ್ಲಾಧ್ಯಕ್ಷರಾದ ಲಯನ್ ಎನ್ ಜಯಪ್ರಕಾಶ್ ರವರು ಇಂದು ಪೇಪರ್ ಬ್ಯಾಗ ದಿನದ ಪ್ರಯುಕ್ತ ಗ್ರಾಹಕರಿಗೆ ಪೇಪರ್ ಮತ್ತು ಬಟ್ಟೆ ಚೀಲಗಳನ್ನು ನೀಡುವ ಮೂಲಕ ಪ್ಲಾಸ್ಟಿಕ್ ಮುಕ್ತ ಜಾಗೃತಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಲಯನ್ಸ್ ಕ್ಲಬ್ ಆಫ್ ಅಂಬಾಸಿಡರ್ ಸಂಸ್ಥೆಯ ಅಧ್ಯಕ್ಷರಾದ ಲಯನ್ ಎಚ್ ಸಿ ಕಾಂತರಾಜುರವರು ಮಾತನಾಡಿ ಕೊಳೆತ ಪ್ಲಾಸ್ಟಿಕ್ ತ್ಯಾಜ್ಯವು ನೇರ ಬಳಕೆ ಪರೋಕ್ಷ ಬಳಕೆಯಿಂದ ಭೂಮಿ, ಜಲ,ಸಾಗರಗಳು ಭಾದಿಸುವ ಕಾರಣದಿಂದ ಆದಷ್ಟು ಮಟ್ಟಿಗೆ ಬಟ್ಟೆ ಪೇಪರ್ ಚೀಲಗಳನ್ನು ಬಳಸಿದರೆ ಮುಂದಿನ ಜನಾಂಗಕ್ಕೆ ಆರೋಗ್ಯಕರವಾದ ಪರಿಸರವನ್ನು ಸಂರಕ್ಷಿಸಬಹುದೆಂದು ಹೇಳಿದರು.
ಲಯನ್ಸ್ 317ಜಿ ಜಿಲ್ಲೆಯ ಸಂಪುಟ ಕಾರ್ಯದರ್ಶಿಯಾದ ಲಯನ್ ಟಿ.ಹೆಚ್ ವೆಂಕಟೇಶ್ ಹೊಸ ಲಯನ್ಸ್ ಜಿಲ್ಲೆಯ ವತಿಯಿಂದ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಈ ವರ್ಷ ಹೆಚ್ಚು ಹೆಚ್ಚು ಆಯೋಜನೆ ಮಾಡಿ ಸಾರ್ವಜನಿಕರಲ್ಲಿ ಮನಃ ಪರಿವರ್ತನೆ ಆಗುವ ರೀತಿಯಲ್ಲಿ ಜಾಗೃತಿ ಉಂಟು ಮಾಡಲು ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸಿ ಆರ್ ದಿನೇಶ್ ಖಜಾಂಚಿ ವಿಷ್ಣು ಸದಸ್ಯರಾದ ಮಕಾಳ ಶಿವಕುಮಾರ್, ಭಾಸ್ಕರನಂದ ,ಅಮರ ಭವಾನಿ, ರವಿಚಂದ್ರ, ಅರುಣ್, ಅಮ್ಮಾಡಿ ಮಹದೇವ್ ,ಡಾಕ್ಟರ್ ಕಿಶೋರ್ ಹಾಜರಿದ್ದರು .