ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣ…ರಾಜಕೀಯ ತಿರುವು ಪಡೆಯುತ್ತಿರುವ ಹತ್ಯೆ…
- CrimeMysore
- July 12, 2023
- No Comment
- 59
ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣ…ರಾಜಕೀಯ ತಿರುವು ಪಡೆಯುತ್ತಿರುವ ಹತ್ಯೆ…
ಮೈಸೂರು,ಜು12,Tv10 ಕನ್ನಡ
ಟಿ.ನರಸೀಪುರದಲ್ಲಿ ಹನುಮಜಯಂತಿ ಆಚರಣೆ ವೇಳೆ ಹತ್ಯೆಯಾದ ಯುವಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಪ್ರಕರಣ ರಾಜಕೀಯ ತಿರುವು ಪಡೆಯುತ್ತಿದೆ.ಸರ್ಕಾರಾಧಿಕಾರಕ್ಕೆ ಬರುತ್ತಿದ್ದಂತೆಯೇ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಹೇಳಿಕೆಗಳು ಸಹಜವಾಗಿ ಕೇಳಿ ಬರುತ್ತಿದೆ.ಸರ್ಕಾರದ ವಿರುದ್ದ ಎಂದಿನಂತೆ ವಿರೋಧ ಪಕ್ಷಗಳು ವಾಗ್ಧಾಳಿ ಶುರುಮಾಡಿವೆ. ಈಗಾಗಲೇ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ ವೇಳೆ ಬೈಕ್ ಪಾರ್ಕಿಂಗ್ ಹಾಗೂ ಹನುಮಜಯಂತಿ ಆಚರಣೆ ವೇಳೆ ಪುನೀತ್ ರಾಜ್ ಕುಮಾರ್ ಫೋಟೋ ಬಳಸಿದ ಹಿನ್ನಲೆ ಕೊಲೆ ನಡೆದಿದೆ ಎಂಬ ವಿಚಾರ ವನ್ನ ಬಹಿರಂಗಪಡಿಸಿದ್ದಾರೆ.ಈ ಸಂಭಂಧ ನಾಲ್ವರು ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಈ ಘಟನೆ ಅತ್ಯಂತ ಸೂಕ್ಷ್ಮವಾಗಿರುವ ಹಿನ್ನಲೆ ಪೊಲೀಸರು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ.ಹೀಗಿದ್ದರೂ ವಾಗ್ಧಾಳಿಗಳಿಗೆ ಅಂಕುಶವಿಲ್ಲದಂತೆ ಸಾಗಿದೆ.ಇಂತಹ ಘಟನೆಗಳು ನಡೆದಾಗ ಯಾವುದೇ ವಿರೋಧ ಪಕ್ಷಗಳು ಲಾಭ ಮಾಡಿಕೊಳ್ಳಲು ಯತ್ನಿಸುವುದು ಸಹಜ.ಆದ್ರೆ ಇಂತಹ ವಿಚಾರದಲ್ಲಿ ರಾಜಕೀಯ ನಾಯಕರು ನೀಡುವ ಹೇಳಿಕೆಗಳು ಪರಿಸ್ಥಿತಿಯನ್ನ ಉಲ್ಭಣಗೊಳಿಸಲು ಪ್ರೇರೇಪಣೆ ನೀಡಿದಂತಾಗುತ್ತದೆ.ಯಾವುದೇ ಪಕ್ಷಗಳಾಗಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ.ಮೃತ ವೇಣುಗೋಪಾಲ ನಾಯಕ್ ರ ಪತ್ನಿ ಈಗಾಗಲೇ ತಮ್ಮ ಅನುಮಾನವನ್ನ ವ್ಯಕ್ತಪಡಿಸಿದ್ದಾರೆ.ಪುನೀತ್ ರಾಜ್ ಕುಮಾರ್ ಫೋಟೋ ಬಳಸಿದ ವಿಚಾರದಲ್ಲಿ ಗಲಾಟೆ ನಡೆದಿತ್ತು.ರಾಜಿ ಸಂಧಾನ ಮಾಡಿಕೊಳ್ಳಲು ಕರೆಸಿ ಹತ್ಯೆ ಮಾಡಿದ್ದಾರೆಂದು ಹೇಳಿಕೆ ನೀಡಿದ್ದಾರೆ.ಹೀಗಿದ್ದರೂ ಕೋಮುಗಲಭೆ ಸೃಷ್ಟಿಯಾಗುವಂತಹ ಹೇಳಿಕೆಗಳು ಬರುತ್ತಿವೆ.ಹಿಂದಿನ ಸರ್ಕಾರಗಳ ಆಡಳಿತದ ಅವಧಿಯಲ್ಲಿ ನಡೆದ ಇಂತಹ ಘಟನೆಗಳ ವೇಳೆ ಇಂತಹ ಹೇಳಿಕೆಗಳು ಸಾಕಷ್ಟು ಎಡವಟ್ಟು ಮಾಡಿರುವ ಉದಾಹರಣೆಗಳು ಇವೆ.ಜನರ ಮಧ್ಯೆ ಕೋಮು ಧ್ವೇಷ ಸೃಷ್ಟಿಸುವ ಇಂತಹ ಪ್ರಯತ್ನಗಳಿಗೆ ಕಡಿವಾಣ ಬೀಳಬೇಕಿದೆ.ಇಂತಹ ಸೂಕ್ಷ್ಮ ವಿಚಾರಗಳನ್ನ ರಾಜಕೀಯವಾಗಿ ಲಾಭ ಪಡೆಯಲು ನಡೆಸುವ ಹುನ್ನಾರಕ್ಕೆ ಬ್ರೇಕ್ ಹಾಕಬೇಕಿದೆ.ಹತ್ಯೆಗೆ ಕಾರಣವಾದ ಸತ್ಯಾಂಶವನ್ನ ಪೊಲೀಸರು ಆದಷ್ಟು ಬೇಗ ಭೇಧಿಸಿ ಬಹಿರಂಗಪಡಿಸಿದರೆ ಸಾಮಾನ್ಯ ಜನರಲ್ಲಿ ಮೂಡಿರುವ ಗೊಂದಲಗಳು ನಿವಾರಣೆಯಾಗಲಿದೆ.ಈ ಸಂಧರ್ಭದಲ್ಲಿ ಪೊಲೀಸರ ಪಾತ್ರ ಪ್ರಾಮುಖ್ಯತೆ ಪಡೆಯುತ್ತದೆ.ಯಾವುದೇ ಒತ್ತಡ ಹೇರದೆ ತೆನಿಖೆ ನಡೆಸಲು ರಾಜಕೀಯ ನಾಯಕರು ಅವಕಾಶ ಕಲ್ಪಿಸಬೇಕಿದೆ…