ಜಮೀನು ವಿಚಾರದಲ್ಲಿ ಕಿರಿಕ್…ಅವಮಾನ ತಾಳದೆ ರೈತ ಆತ್ಮಹತ್ಯೆ..ಮೂವರ ವಿರುದ್ದ FIR ದಾಖಲು…

  • Crime
  • August 6, 2023
  • No Comment
  • 197

ಹುಣಸೂರು,ಆ6,Tv10 ಕನ್ನಡ

ಜಮೀನು ವಿಚಾರದಲ್ಲಿ ಗಲಾಟೆ ಮಾಡಿದ ಮೂವರು ವ್ಯಕ್ತಿಗಳು ರೈತರೊಬ್ಬರನ್ನ ಮರಕ್ಕೆ ಕಟ್ಟಿಹಾಕಿ ಚಪ್ಪಲಿಯಿಂದ ಥಳಿಸಿದ ಘಟನೆ ಹುಣಸೂರು ತಾಲೂಕಿನ ಕುಡಿನೀರಿನ ಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ.ಘಟನೆಯಿಂದ ಅವಮಾನ ತಾಳದ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಘಟನೆಗೆ ಸಂಭಂಧಿಸಿದಂತೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ದ FIR ದಾಖಲಾಗಿದೆ.

ಗುರುರಾವ್ ಭಾಂಗೆ ಆತ್ಮಹತ್ಯೆ ಮಾಡಿಕೊಂಡ ರೈತ.ಹುಣಸೂರಿನ ತರೀಕಲ್ ಕಾವಲಿ ಗ್ರಾಮದಲ್ಲಿ ಗುರುರಾವ್ ಭಾಂಗೆ ರವರಿಗೆ ಸೇರಿದ 2 ಎಕ್ರೆ 5 ಗುಂಟೆ ಜಮೀನಿದೆ.ಪಕ್ಕದ ಜಮೀನಿನವರಾದ ಮಹೇಶ್ ಇವರ ಪತ್ನಿ ಸಾಕಮ್ಮ ಹಾಗೂ ಪುತ್ರ ರಂಜನ್ ಜಮೀನು ವಿಚಾರದಲ್ಲಿ ಕಿರಿಕ್ ಮಾಡಿದ್ದಾರೆ.ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ.ಹೀಗಿದ್ದೂ ಗುರುರಾವ್ ಭಾಂಗೆ ವಿರುದ್ದ ಹುಣಸೂರು ಪೊಲೀಸ್ ಠಾಣೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಕರಣ ದಾಖಲಿಸಿದ್ದಾರೆ.ಇದಕ್ಕೆ ಪ್ರತ್ಯುತ್ತರವಾಗಿ ಗುರುರಾವ್ ಭಾಂಗೆ ಸಹ ದೂರು ದಾಖಲಿಸಿದ್ದಾರೆ.ಈ ಬೆಳವಣಿಗೆಯಿಂದ ಆಗಸ್ಟ್ 4 ರಂದು ಗುರುರಾವ್ ಭಾಂಗೆ ರವರನ್ನ ಮಹೇಶ್,ಸಾಕಮ್ಮ,ರಂಜನ್ ರವರು ಮರಕ್ಕೆ ಕಟ್ಟಿಹಾಕಿ ಚಪ್ಪಲಿಯಿಂದ ಥಳಿಸಿದ್ದಾರೆ.ಇದರಿಂದ ಮನನೊಂದ ಗುರುರಾವ್ ಭಾಂಗೆ ಮಗನಿಗೆ ಫೋನ್ ಮಾಡಿ ನನ್ನ ಸಾವಿಗೆ ಮಹೇಶ್,ಸಾಕಮ್ಮ,ರಂಜನ್ ಕಾರಣ ಎಂದು ತಿಳಿಸಿ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

Spread the love

Related post

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…
ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ… ಮೈಸೂರು,ಸೆ10,Tv10 ಕನ್ನಡ ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ ನಡೆದಿದೆ.ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ…
ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ… ಮೈಸೂರು,ಸೆ6,Tv10 ಕನ್ನಡ ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವ್ಯಕ್ತಿಗೆ ಕಬ್ಬಿಣದ ರಾಡು ಚುಚ್ಚಿ ಸ್ಥಳದಲ್ಲೇ…

Leave a Reply

Your email address will not be published. Required fields are marked *