ಹಾಸನ:ಹಾಡುಹಗಲೇ ಗ್ರಾನೈಟ್ ಉದ್ಯಮಿ ಹತ್ಯೆ…
- Crime
- August 10, 2023
- No Comment
- 172

ಹಾಸನ,ಆ10,Tv10 ಕನ್ನಡ

ಹಾಸನದಲ್ಲಿ ಹಾಡುಹಗಲೇ ಗ್ರ್ಯಾನೈಟ್ ಉದ್ಯಮಿ ಹತ್ಯೆಯಾಗಿದೆ.
ಹಾಸನ ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಘಟನೆ ನಡೆದಿದೆ.
ಕೃಷ್ಣೇಗೌಡ( 53) ಕೊಲೆಯಾದ ಉದ್ಯಮಿ. ತಮ್ಮ ಗ್ರ್ಯಾನೈಟ್ ಫ್ಯಾಕ್ಟರಿಯ ಎದುರಲ್ಲೇ ಭೀಕರವಾಗಿ ಕೊಲೆಯಾಗಿದ್ದಾರೆ.ದುಷ್ಕರ್ಮಿಗಳು
ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಹಂತಕರ ಬಂದನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಸ್ಥಳಕ್ಕೆ ಎಸ್ಪಿ ಹರಿರಾಮ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…