ಕೇರಳ ಗಡಿ ಭಾಗದಲ್ಲಿ ಗಾಂಜಾ ಗಮ್ಮತ್ತು…ನಶೆಯಲ್ಲಿತೂರಾಡಿ ಎದ್ದುಬಿದ್ದ ಯುವತಿಯರು…
- Crime
- August 11, 2023
- No Comment
- 77
ಮೈಸೂರು,ಆ10,Tv10 ಕನ್ನಡ
ಕೇರಳಾ ಗಡಿಭಾಗದ ಪರಿಸರದಲ್ಲಿ ಗಾಂಜಾ ಗಮ್ಮತ್ತು ಮುಗಿಲು ಮುಟ್ಟಿದೆ. ರಾಜಾರೋಷವಾಗಿ ಗಾಂಜ ಸೇವಿಸಿದ ಯುವ ಪೀಳಿಗೆ ಮೈ ಮೇಲೆ ನಿಯಂತ್ರಣವಿಲ್ಲದಂತೆ ತೂರಾಡಿ ಬಿದ್ದ ದೃಶ್ಯಗಳು ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಮಾದಕ ವಸ್ತುಗಳ ಮಾರಾಟದ ಆರೋಪವೂ ಕೇಳಿಬಂದಿದೆ.
ನಗರ ಪ್ರದೇಶಗಳಿಗಷ್ಟೆ ಸೀಮಿತವಾಗಿದ್ದ ಮಾದಕ ವಸ್ತುಗಳ ಆರ್ಭಟ ಪರಿಸರ ಸ್ಥಳಗಳಲ್ಲೂ ತಾಂಡವವಾಡುತ್ತಿದೆ. ಯುವಕ ಯುವತಿಯರ ವರ್ತನೆ ಮಾದಕ ವಸ್ತುಗಳ ಚಟಕ್ಕೆ ದಾಸರಾಗುತ್ತಿರುವ ಪ್ರಕರಣಗಳಿಗೆ ಸಾಕ್ಷಿಯಾಗಿದೆ.ಮಾದಕ ವಸ್ತುಗಳಿಗೆ ಕಡಿವಾಣ ಹಾಕದಿದ್ದಲ್ಲಿ ಯುವ ಪೀಳಿಗೆ ಮತ್ತಷ್ಟು ದಾರಿ ತಪ್ಪಲಿದೆ.ಕೇರಳಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಇನ್ನಾದರೂ ಯುವಪೀಳಿಗೆಯನ್ನ ರಕ್ಷಿಸುವ ಕೆಲಸವಾಗಲಿ…