
ಮಳೆ ಇಲ್ಲದೆ ಸೊರಗುತ್ತಿರುವ ರಸ್ತೆಬದಿ ಮರಗಳಿಗೆ ನೀರು…ರಘುಲಾಲ್ ಸಂಸ್ಥೆಯಿಂದ ಸಾಮಾಜಿಕ ಕಳಕಳಿ…
- TV10 Kannada Exclusive
- August 18, 2023
- No Comment
- 195
ಮಳೆ ಇಲ್ಲದೆ ಸೊರಗುತ್ತಿರುವ ರಸ್ತೆಬದಿ ಮರಗಳಿಗೆ ನೀರು…ರಘುಲಾಲ್ ಸಂಸ್ಥೆಯಿಂದ ಸಾಮಾಜಿಕ ಕಳಕಳಿ…
ಮೈಸೂರು,ಆ18,Tv10 ಕನ್ನಡ
ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆ ಒಣಗುತ್ತಿರುವ ರಸ್ತೆ ಬದಿಯ
ಗಿಡಗಳಿಗೆ ಪ್ರತಿದಿನ ಮೈಸೂರಿನ ಹೆಸರಾಂತ ಔಷಧಿ ವ್ಯಾಪಾರಿಗಳಾದ ರಘುಲಾಲ್ ಕಂಪನಿಯು ನೀರು ಹಾಯಿಸಿ ಆರೈಕೆ ಮಾಡುತ್ತಿದೆ.ಸಂಸ್ಥೆಯ ಸಂಸ್ಥಾಪಕ ಎನ್ ರಾಘವನ್ ಅವರು ಈ ಮೂಲಕ ಸಾಮಾಜಿಕ ಕಳಕಳಿ ತೋರಿದ್ದಾರೆ.
ಮೈಸೂರಿನ ಪ್ರಮುಖ ರಸ್ತೆಗಳಲ್ಲಿರುವ ಗಿಡಗಳಿಗೆ
ನೀರಿನ ಟ್ಯಾಂಕರ್ ಮೂಲಕ ಅಗತ್ಯ ನೀರು ಸರಬರಾಜು ಮಾಡುತ್ತಿದ್ದಾರೆ.ರಘುಲಾಲ್ ಕಂಪನಿಯ ಕಳಕಳಿಗೆ ಮೆಚ್ಚುಗೆ ವ್ಯಕ್ತವಾಗಿದೆ…