ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ…ಆಶ್ರಯ ಯೋಜನೆಗೆ ಮೀಸಲಾದ ಜಮೀನು ಒತ್ತುವರಿ ತೆರುವು…ಮಳೆಯಲ್ಲೂ ಕಾರ್ಯಾಚರಣೆ…

ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ…ಆಶ್ರಯ ಯೋಜನೆಗೆ ಮೀಸಲಾದ ಜಮೀನು ಒತ್ತುವರಿ ತೆರುವು…ಮಳೆಯಲ್ಲೂ ಕಾರ್ಯಾಚರಣೆ…

ಮೈಸೂರು,ಆ19,Tv10 ಕನ್ನಡ

ಬೆಳ್ಳಂಬೆಳಗ್ಗೆ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿದ್ದವರಿಗೆ ಮೈಸೂರು ತಾಲೂಕು ತಹಸೀಲ್ದಾರ್ ಬಿ.ಎನ್.ಗಿರೀಶ್ ಶಾಕ್ ಕೊಟ್ಟಿದ್ದಾರೆ.ಆಶ್ರಯ ಯೋಜನೆಗಾಗಿ ಮಂಜೂರಾಗಿದ್ದ ಸರ್ಕಾರಿ ಗೋಮಾಳ ರಕ್ಷಿಸಿದ್ದಾರೆ.ಸರ್ಕಾರಿ ಜಮೀನಿನಲ್ಲಿ ನಿರ್ಮಿಸಲಾದ ಹಸು ಕೊಟ್ಟಿಗೆಗಳನ್ನ ನೆಲಸಮ ಮಾಡಿ ತೆರುವುಗೊಳಿಸಿದ್ದಾರೆ.ಮಳೆಯನ್ನೂ ಲೆಕ್ಕಿಸದ ತಹಸೀಲ್ದಾರ್ ತೆರುವು ಕಾರ್ಯಾಚರಣೆ ನಡೆಸಿದ್ದಾರೆ.

ಮೈಸೂರು ತಾಲೂಕು ಇಲವಾಲ ಹೋಬಳಿ ಆನಂದೂರು ಗ್ರಾಮದ ಸರ್ವೆ ನಂ 6 ಮೂಲತಃ ಸರ್ಕಾರಿ ಗೋಮಾಳ.1996 ರಲ್ಲಿ ಆಶ್ರಯ ಯೋಜನೆಗಾಗಿ 4 ಎಕ್ರೆ ಮಂಜೂರಾಗಿತ್ತು.ಸದರಿ ಜಮೀನಿನಲ್ಲಿ ಆನಂದೂರು ಗ್ರಾಮದ ಗವಿರಂಗೇಗೌಡ ಹಾಗೂ ಇತರರು 20 ಗುಂಟೆ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ. ಸದರಿ ಜಮೀನಿನಲ್ಲಿ ಹಸು ಕೊಟ್ಟಿಗೆ ಸಹ ನಿರ್ಮಿಸಲಾಗಿದೆ.ಬೆಳಗಿನ ಮಳೆಯಲ್ಲೂ ಸಹ ತೆರುವು ಕಾರ್ಯಾಚರಣೆ ಪೂರ್ಣಗೊಳಿಸಿ ಸರ್ಕಾರಿ ಜಮೀನನ್ನ ರಕ್ಷಿಸಿದ್ದಾರೆ.

ತಹಸೀಲ್ದಾರ್ ಟಿ.ಎನ್.ಗಿರೀಶ್ ಗೆ ತಾಲೂಕು ಪಂಚಾಯ್ತಿ ಇ.ಓ.ಗಿರೀಶ್,ಭೂ ದಾಖಲೆಗಳ ಸಹಾಯಕ ನಿರ್ದೇಶಕ ಚಿಕ್ಕಣ್ಣ,ತಾಲೂಕು ಸರ್ವೇಯರ್ ವೆಂಕಟೇಶ್,ಉಪತಹಸೀಲ್ದಾರ್ ಕುಬೇರ್,ರಾಜಸ್ವ ನಿರೀಕ್ಷಕರಾದ ಶಿವಕುಮಾರ್ ಸೇರಿದಂತೆ ಇತರರು ಸಾಥ್ ನೀಡಿದರು…

Spread the love

Related post

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…
ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ… ಮೈಸೂರು,ಸೆ10,Tv10 ಕನ್ನಡ ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ ನಡೆದಿದೆ.ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ…
ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ… ಮೈಸೂರು,ಸೆ6,Tv10 ಕನ್ನಡ ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವ್ಯಕ್ತಿಗೆ ಕಬ್ಬಿಣದ ರಾಡು ಚುಚ್ಚಿ ಸ್ಥಳದಲ್ಲೇ…

Leave a Reply

Your email address will not be published. Required fields are marked *