ತಮಿಳುನಾಡಿಗೆ ನೀರು ನಿಲ್ಲಿಸಿ…ಖಾಲಿ ಬಿಂದಿಗೆ ಪ್ರದರ್ಶಿಸಿ ರೈತರ ಪ್ರತಿಭಟನೆ…ಮುಖ್ಯಮಂತ್ರಿಚಂದ್ರು ಸಾಥ್…
- TV10 Kannada Exclusive
- August 23, 2023
- No Comment
- 88
ಮೈಸೂರು,ಆ23,Tv10 ಕನ್ನಡ
ಕಬಿನಿ ಕಾವೇರಿ ನೀರು ತಮಿಳುನಾಡಿಗೆ ಹರಿಸುತ್ತಿರುವ ಸರ್ಕಾರದ ಕ್ರಮವನ್ನ ಖಂಡಿಸಿ ರೈತರು ಇಂದು ಕಾಡಾ ಕಚೇರಿಗೆ ಮುಂದು ಪ್ರತಿಭಟಿಸಿದರು.ರೈತರಿಗೆ ದ್ರೋಹ ಬಗೆಯುತ್ತಿರುವ ಸರ್ಕಾರದ ವಿರುದ್ಧ ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ ನಡೆಸಿ ಆಕ್ರೋಷ ವ್ಯಕ್ತಪಡಿಸಿದರು.
ರೈತ ಮುಖಂಡರನ್ನು ಹೊರಗಿಟ್ಟು ನಾಟಕೀಯವಾಗಿ ಸರ್ವ ಪಕ್ಷ ಸಭೆ ನಡೆಸುವ ಕಾರ್ಯಕ್ಕೆ ಧಿಕ್ಕಾರವಿರಲಿ ಕೂಡಲೇ ನೀರು ನಿಲ್ಲಿಸದಿದ್ದರೆ ರಾಜ್ಯ ವ್ಯಾಪಿ ಚಳುವಳಿ ನಡೆಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಕನ್ನಡಪರ ಸಂಘಟನೆಗಳು, ಅಮ್ಮಾ ಅದ್ಮೀ ಪಕ್ಷದ ವತಿಯಿಂದ ಇಂದು ಕುವೆಂಪು ಉದ್ಯಾನವನದಲ್ಲಿ ಸಭೆ ಸೇರಿ ಚರ್ಚಿಸಿ ನಂತರ ಪ್ರತಿಭಟನೆ ಮೆರವಣಿಗೆ ಮೂಲಕ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ನಿಯಂತ್ರಿಸಿದರು.ಇಂದಿನ ರೈತರ ಪ್ರತಿಭಟನೆಗೆ ಚಿತ್ರನಟ ಹಾಗೂ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸಾಥ್ ನೀಡಿದರು.
ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ರೈತ ಮುಖಂಡ ಕುರುಬೂರು ಶಾಂತಕುಮಾರ್ ಮಾತನಾಡಿ ರಾಜ್ಯದ ರೈತರ ಹಿತ ಶಕ್ತಿ ಕಾಪಾಡುವ ಕಚೇರಿಯಾಗಿದ್ದರೆ ಕೂಡಲೇ ನದಿಗೆ ನೀರು ಹರಿಸುವುದನ್ನ ನಿಲ್ಲಿಸಿ ಇಲ್ಲವೇ ಕಚೇರಿ ಬಾಗಿಲು ಮುಚ್ಚಿ ಮನೆಗೆ ಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು
ಆಮ್ ಆದ್ಮೀ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ ರಾಜ್ಯ ಸರ್ಕಾರ ತುಳಿತಕ್ಕೆ ಒಳಗಾದ ರೈತ ಮುಖಂಡರನ್ನು ಹೊರಗಿಟ್ಟು ರೈತರಿಗೆ ಅನ್ಯಾಯ ಮಾಡುವವರೇ ಸರ್ವ ಪಕ್ಷದ ಸಭೆ ನಡೆಸುವುದು ಸಮಂಜಸ ಅಲ್ಲ. ಪಕ್ಷಗಳು ನೀರಿನ ವಿಚಾರದಲ್ಲಿ ರೈತರಿಗೆ ವಂಚನೆ ಮಾಡುತ್ತಲೆ ಬಂದಿದ್ದಾರೆ. ಅಂತಹವರೇ ಇಂದು ಸಭೆ ನಡೆಸುತ್ತಿದ್ದಾರೆ. ಇವರಿಂದ ರಾಜ್ಯದ ರೈತರಿಗೆ ನ್ಯಾಯ ಸಿಗಲು ಸಾಧ್ಯವೇ..?ಎಂದು ಪ್ರಶ್ನಿಸಿದರು…
ಇಂದಿನ ಪ್ರತಿಭಟನೆಯಲ್ಲಿ ರೈತ ಮುಖಂಡ ಮೀಸೆ ಮಂಜಣ್ಣ,ಹತ್ತಳಿ ದೇವರಾಜ್ ಫಿ ಸೋಮಶೇಖರ್
ಬರಡನಫುರ ನಾಗರಾಜು, ಹಳಿಕರೆಹುಂಡಿ ಬಾಗ್ಯರಾಜ್, ಕಿರಗಸೂರಶಂಕರ ಕಮಲಮ್ಮ ಸಿದ್ದೇಶ. ವೆಂಕಟೇಶ ,ರವಿ ಕನ್ನಡ ಸಂಘಟನೆಗಳ ಮಂಜುನಾಥ್
ಅಮ್ಮ್ ಅದ್ಮೀ ಪಕ್ಷದ ಮೋಹನ್ ದಾಸರಿ ಕುಶಾಲಸ್ವಾಮಿ
ನಂಜಪ್ಪ ಕಾಳೇಗೌಡ ಮಾಳವಿಕಾ
ರಂಗಯ್ಯ ರಾಜಶ್ರೀ ಸಿದ್ದರಾಜು ಭಾಗವಹಿಸಿದ್ದರು…