ಕಲ್ಲಿನ ಶಿಲೆಗಳ ಕಳುವಿಗೆ ಯತ್ನ…6 ಮಂದಿ ಬಂಧನ…
- CrimeMysore
- August 24, 2023
- No Comment
- 175

ಕಲ್ಲಿನ ಶಿಲೆಗಳ ಕಳುವಿಗೆ ಯತ್ನ…6 ಮಂದಿ ಬಂಧನ…
ಮೈಸೂರು,ಆ24,Tv10 ಕನ್ನಡ
ಬೆಲೆ ಬಾಳುವ ಅಮೂಲ್ಯ ಕಲ್ಲಿನ ಶಿಲೆಗಳ ಕಳ್ಳತನಕ್ಕೆ ಯತ್ನಿಸಿದ 6 ಮಂದಿ ಬಂಧಿಸುವಲ್ಲಿ
ಮೈಸೂರು ಮೇಟಗಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೈಸೂರಿನ ಗೋಕುಲಂ 3ನೇ ಹಂತದ ನಿವಾಸಿ ಮನೋಜ್ (26) ಕೆ.ಸಚಿನ್ (24)
ನಾಗನಹಳ್ಳಿ ನಿವಾಸಿ ಎನ್. ಸಂತೋಷ್ ಕುಮಾರ್ (33)
ನಂಜನಗೂಡು ತಾಲೂಕು
ತಾಲೂರು ಗ್ರಾಮದ ಚಂದ್ರಶೇಖರ ಮೂರ್ತಿ (42)
ಮೆಲ್ಲಹಳ್ಳಿ ಗ್ರಾಮದ ಗೋಪಾಲ್ (36)
ಭುಗತಗಳ್ಳಿ ನಿವಾಸಿ ನಾಗೇಶ (30) ಬಂಧಿತ ಆರೋಪಿಗಳು.
ಮೈಸೂರು ಬೆಂಗಳೂರು ಹೆದ್ದಾರಿಯ ನಾಗನಹಳ್ಳಿ ಗೇಟ್ ಬಳಿ ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ.
ಕಸ್ತೂರಿ ನಿವಾಸ ಹೋಟೆಲ್ ಪಕ್ಕದ ಕಲ್ಲಿನ ಶಿಲೆಗಳನ್ಬ ತಯಾರಿಸುವ ಕಾರ್ಯಾಗಾರದಲ್ಲಿ
ಇದ್ದ 2 ಲಕ್ಷ ರೂಪಾಯಿ ಮೌಲ್ಯದ ಒಂದು ಜೊತೆ ಕಲ್ಲಿನ ಆನೆ ಶಿಲೆಗಳನ್ನ
ಟಾಟಾ ಜೀಪ್ ವಾಹನಲ್ಲಿ ತೆಗೆದುಕೊಂಡು ಹೋಗಲು ಯತ್ನಿಸಿದಾಗ ಮೇಟಗಳ್ಳಿ ಠಾಣೆ
ಇನ್ಸಪೆಕ್ಟರ್ ದಿವಾಕರ್ ನೇತೃತ್ವದ ತಂಡ ಬಂಧಿಸಿದೆ.
ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…