ರಸ್ತೆ ಅಪಘಾತ:ರೈತ ಸಾವು…ರಸ್ತೆ ತಡೆ ನಡೆಸಿ ಪ್ರತಿಭಟನೆ…
- Crime
- August 26, 2023
- No Comment
- 125

ಮೈಸೂರು,ಆ26,Tv10 ಕನ್ನಡ

ರಸ್ತೆ ಅಪಘಾತದಲ್ಲಿ ರೈತರೊಬ್ಬರು ಮೃತಪಟ್ಟ ಹಿನ್ನಲೆ ಅನ್ನದಾತರು ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ಘಟನೆ ಮೈಸೂರು-ಟಿ.ನರಸೀಪುರ ಹೆದ್ದಾರಿಯ ಕುರುಬೂರು ಗ್ರಾಮದ ಬಳಿ ನಡೆಯಿತು.ನಾಗರಾಜ್ (80) ಅಪಘಾತದಲ್ಲಿ ಮೃತಪಟ್ಟ ರೈತ.ಪುತ್ರ ರಾಜೇಶ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ನಾಗರಾಜ್ ಹಾಗೂ ಪುತ್ರ ರಾಜೇಶ್ ಜಮೀನಿನ ಕೆಲಸ ಮುಗಿಸಿ ತಮ್ಮ ಬೈಕ್ ನಲ್ಲಿ ಬರುತ್ತಿದ್ದ ವೇಳೆ ವೇಗವಾಗಿ ಬರುತ್ತಿದ್ದ ಮತ್ತೊಂದು ಬೈಕ್ ಢಿಕ್ಕಿ ಹೊಡೆದಿದೆ.ಇದರ ಪರಿಣಾಮ ನಾಗರಾಜ್ ಮೃತಪಟ್ಟಿದ್ದಾರೆ.ರಾಜೇಶ್ ಗೆ ಗಂಭೀರ ಗಾಯವಾಗಿದೆ.ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ ಮರಗಿಡಗಳು ಹಾಗೂ ಪೊದೆಗಳನ್ನ ಕತ್ತರಿಸಿ ಟ್ರಿಮ್ ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾದ ಕಾರಣ ಅಪಘಾತ ನಡೆದಿದೆ ಎಂದು ಆಕ್ರೋಷ ವ್ಯಕ್ತಪಡಿಸಿದ ರೈತರು ನಾಗರಾಜ್ ರವರ ಮೃತದೇಹವನ್ನ ಇಟ್ಟು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಕೆಲವು ದಿನಗಳ ಹಿಂದೆ ನಡೆದ ಭೀಕರ ಅಪಘಾತದಲ್ಲಿ ಬಳ್ಳಾರಿಯ 9 ಮಂದಿ ಮೃತಪಟ್ಟಿದ್ದರು.ಹೀಗಿದ್ದೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ.ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಂಡಿಲ್ಲ.ಹೀಗಾಗಿ ಅಪಘಾತಗಳು ನಡೆಯುತ್ತಿವೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಆಕ್ರೋಷ ವ್ಯಕ್ತಪಡಿಸಿದರು….