ಮೈಸೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ…
- CrimeMysore
- August 27, 2023
- No Comment
- 295

ಮೈಸೂರು,ಆ27,Tv10 ಕನ್ನಡ

ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಮಾಡಿಕೊಂಡಿರಯವ ಘಟನೆ
ಚಾಮುಂಡಿಪುರಂನಲ್ಲಿ
ನಡೆದಿದೆ.ಒಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ
ಉಳಿದ ಮೂರು ಶವಗಳ ಮನೆಯ ಹಾಲ್ ನಲ್ಲಿ ಕಂಡು ಬಂದಿದೆ.
ಗಂಡ ಹೆಂಡತಿ ಇಬ್ಬರು ಹೆಣ್ಣು ಮಕ್ಕಳು ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಹಾಗೂ ಡಿಸಿಪಿಗಳಾದ ಮುತ್ತುರಾಜ್ ಮತ್ತು ಜಾಹ್ನವಿ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಆರ್.ಎಂ.ಸಿ.ಯಲ್ಲಿ ಕಮೀಷನ್ ಏಜೆಂಟ್ ಆಗಿರುವ
ಮಹದೇವಸ್ವಾಮಿ ಮತ್ತು ಅನಿತಾ ದಂಪತಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
ದೊಡ್ಡ ಮಗಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಅನಿತಾ ಮೃತದೇಹ ಕುರ್ಚಿ ಮೇಲೆ ಚಿಕ್ಕ ಮಗಳು ಕೊಠಡಿಯಲ್ಲಿ
ಮಹದೇವ ಸ್ವಾಮಿ ಹಾಲ್‌ನಲ್ಲಿ ಪತ್ತೆಯಾಗಿದೆ.
ಬಂಡಿಪಾಳ್ಯದಲ್ಲಿ ಮಳಿಗೆ ಹೊಂದಿದ್ದರು.
ಮಹದೇವಸ್ವಾಮಿ (48)
ಅನಿತಾ (35)
ಚಂದ್ರಕಲಾ (17)
ಧನಲಕ್ಷ್ಮಿ (15) ಮೃತರು.ಕೆ.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..