ಮೈಸೂರು:ಬಿಸಿಎಂ ಹಾಸ್ಟೆಲ್ ಹೆಣ್ಣುಮಕ್ಕಳಿಗೆ ಟಾರ್ಚರ್…ಸಿಎಂ ಗೆ ಪತ್ರ ಬರೆದ್ರೂ ಡೋಂಟ್ ಕೇರ್…ವಿಧ್ಯಾರ್ಥಿನಿಯರ ಗೋಳು ಕೇಳುವವರಾರು…?
- TV10 Kannada Exclusive
- August 28, 2023
- No Comment
- 180
ಮೈಸೂರು:ಬಿಸಿಎಂ ಹಾಸ್ಟೆಲ್ ಹೆಣ್ಣುಮಕ್ಕಳಿಗೆ ಟಾರ್ಚರ್…ಸಿಎಂ ಗೆ ಪತ್ರ ಬರೆದ್ರೂ ಡೋಂಟ್ ಕೇರ್…ವಿಧ್ಯಾರ್ಥಿನಿಯರ ಗೋಳು ಕೇಳುವವರಾರು…?
ಮೈಸೂರು,ಆ28,Tv10 ಕನ್ನಡ
ಮೈಸೂರಿನ ಗಾಯಿತ್ರಿಪುರಂ ನಲ್ಲಿರುವ ಬಿಸಿಎಂ ಹಾಸ್ಟೆಲ್ ನಲ್ಲಿರುವ ವಿಧ್ಯಾರ್ಥಿನಿಯರ ಗೋಳು ಕೇಳುವವರೇ ಇಲ್ಲದಂತಾಗಿದೆ.ಅಲ್ಲಿನ ಸಿಬ್ಬಂದಿಗಳ ದೌರ್ಜನ್ಯಕ್ಕೆ ವಿಧ್ಯಾರ್ಥನಿಯರು ಹೈರಾಣರಾಗಿದ್ದಾರೆ.ಬಡತನದ ಬೇಗೆಯಲ್ಲಿ ವಿವಿದ ಭಾಗಗಳಿಂದ ಓದಲು ಬಂದ ವಿಧ್ಯಾರ್ಥಿನಿಯರು ಸಿಬ್ಬಂದಿಗಳ ಟಾರ್ಚರ್ ಗೆ ತತ್ತರಿಸಿದ್ದಾರೆ.ವಿಧ್ಯಾರ್ಥಿನಿಯರ ನೆರವಿಗೆ ಆರ್.ಟಿ.ಐ.ಕಾರ್ಯಕರ್ತರೊಬ್ಬರು ಬಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರೂ ಸಿಬ್ಬಂದಿಗಳು ಕ್ಯಾರೆ ಎನ್ನುತ್ತಿಲ್ಲ.ಅಲ್ಲಿನ ಫೋಟೋಗಳು ವಿಧ್ಯಾರ್ಥಿನಿಯರ ಬವಣೆಯನ್ನ ಪ್ರದರ್ಶಿಸುತ್ತಿದೆ
ಸಿಬ್ಬಂದಿಗಳು ಮಾಡಬೇಕಾದ ಕೆಲಸಗಳನ್ನ ವಿಧ್ಯಾರ್ಥಿನಿಯರು ಮಾಡಬೇಕಾದ ದುಃಸ್ಥಿತಿ ಇಲ್ಲಿಯದು.ಹಾಸ್ಟೆಲ್ ಸ್ವಚ್ಛಗೊಳಿಸುವುದು,ಅಡಿಗೆ ಕೆಲಸ ಮಾಡಿಸುವುದು,ಪಾತ್ರೆಗಳನ್ನ ತೊಳೆಸುವುದು,ಮುಖ್ಯವಾಗಿ ಶೌಚಾಲಯಗಳನ್ನೂ ಸಹ ಸ್ವಚ್ಛಗೊಳಿಸುವ ಕೆಲಸಗಳನ್ನ ವಿಧ್ಯಾರ್ಥಿನಿಯರೇ ಮಾಡುತ್ತಿದ್ದಾರೆ.ಇದು ಸಾಲದೆಂಬಂತೆ ಊಟ ನೀಡದೆ ಸತಾಯಿಸುತ್ತಿರುವುದೂ ಸಹ ಕೇಳಿ ಬರುತ್ತಿದೆ.ಕುಂಟುನೆಪ ನೀಡಿ ಊಟ ಹಾಕದೆ ತೊಂದರೆ ಕೊಡುತ್ತಿದ್ದಾರೆ.ಈ ಬಗ್ಗೆ ಯಾವುದೇ ವಿಧ್ಯಾರ್ಥಿನಿಯರು ಪ್ರಶ್ನಿಸಲು ಧೈರ್ಯ ಸಾಲದೇ ಹೆದರಿ ಕಾಲ ದೂಡುತ್ತಿದ್ದಾರೆ.ಮೈಸೂರಿನ
ಆರ್.ಟಿ.ಐ.ಕಾರ್ಯಕರ್ತ ಮೋಹನ್ ಕುಮಾರ್ ಎಂಬುವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ರವರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಉಡಾಫೆ ವರ್ತನೆ ತೋರುತ್ತಿರುವ ಸಿಬ್ಬಂದಿಗಳು ಯಾರಿಗೆ ಬೇಕಾದ್ರೂ ದೂರು ನೀಡುವಂತೆ ನಿರ್ಲಕ್ಷಿಸುತ್ತಿರುವುದಾಗಿ ಆರೋಪ ಕೇಳಿ ಬಂದಿದೆ.ಸಂಭಂಧಪಟ್ಟ ಅಧಿಕಾರಿಗಳು ಕೂಡಲೇ ಹಾಸ್ಟೆಲ್ ಗೆ ಭೇಟಿ ನೀಡಿ ವಿಧ್ಯಾರ್ಥಿನಿಯರ ನೆರವಿಗೆ ಧಾವಿಸಬೇಕಿದೆ…