ಸುಳ್ಳುಸುದ್ದಿ ಹಬ್ಬಿಸುವವರಿಗೆ,ಚಾರಿತ್ರ್ಯವಧೆ ಮಾಡುವವರಿಗೆ ಕಡಿವಾಣ ಹಾಕಿ…ಸಿದ್ದರಾಮಯ್ಯ ಖಡಕ್ ವಾರ್ನಿಂಗ್…
- TV10 Kannada Exclusive
- August 28, 2023
- No Comment
- 162
ಮೈಸೂರು,ಆ28,Tv10 ಕನ್ನಡ
ಸುಳ್ಳು ಸುದ್ದಿ ಹಬ್ಬಿಸುವವರಿಗೆ,
ಚಾರಿತ್ರ್ಯ ವಧೆ ಮಾಡುವವರಿಗೆ ಕಡಿವಾಣ ಹಾಕಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಸಮಾಜದಲ್ಲಿ ಶಾಂತಿ ಕದಡುವ ವದಂತಿಗಳನ್ನ ಸೃಷ್ಟಿ ಮಾಡೋರ ಮೇಲೆ ಕೇಸ್ ಹಾಕಿ.
ಕಂಪ್ಲೇಂಟ್‌ಗೆ ಕಾಯಬಾರದು.
ಸುಮೋಟೋ ಕೇಸ್ ಹಾಕಿ ಒಳಗಡೆ ಹಾಕ್ಬೇಕು.ತಕ್ಷಣ ಕೋರ್ಟಿಗೆ ಪ್ರಡ್ಯೂಸ್ ಮಾಡಬೇಕು.
ಯಾವುದೇ ಮುಲಾಜು ಇಡಬಾರದು ಎಂದು ಇಂದು ನಡೆದ
ಕೆಡಿಪಿ ಸಭೆಯಲ್ಲಿ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.
ಮೈಸೂರು, ಮಂಡ್ಯ ಚಾಮರಾಜನಗರ, ಕೊಡಗು, ಹಾಸನ ಭಾಗದಲ್ಲಿ ಡ್ರಗ್ಸ್ ಬಗ್ಗೆ ಎಚ್ಚರಿಕೆ ವಹಿಸಬೇಕು.
ಅನಧಿಕೃತವಾದ ಕ್ಲಬ್, ಬಾರ್‌ಗಳನ್ನ ಬಂದ್ ಮಾಡಿ.ಅವರ ಮೇಲೆ ಕ್ರಮ ಆಗಬೇಕು.
ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುವವರು ಯಾರೇ ಆದ್ರೂ ಕ್ರಮ ಆಗಬೇಕು.
ಯುವಕರನ್ನ, ವಿದ್ಯಾರ್ಥಿಗಳನ್ನ ತಪ್ಪು ದಾರಿಗೆಳುವುದು ಕಂಡುಬಂದ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು
ಡಿಜಿಪಿ ಬೋರಲಿಂಗಯ್ಯ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್‌ಗೆ ಖಡಕ್ ಸೂಚನೆ ನೀಡಿದರು…