ಆನೆ ದಾಳಿ…ರೈತನಿಗೆ ಗಂಭೀರಗಾಯ…
- CrimeMysore
- September 2, 2023
- No Comment
- 181
ಎಚ್.ಡಿ.ಕೋಟೆ,ಸೆ2,Tv10 ಕನ್ನಡ
ಬಾಳೆ ಬೆಳೆ ಕಾವಲಿಗೆ ಹೋದ ಅನ್ನದಾತನ ಮೇಲೆ ಆನೆ ದಾಳಿ ನಡೆಸಿದೆ.ಘಟನಸಯಲ್ಲಿ ರೈತ ಸಿಲುಕಿ ಗಂಭೀರವಾಗಿ ಸಿದ್ದರಾಜನಾಯ್ಕ(35) ಗಂಭೀರವಾಗಿ ಗಾಯಗೊಂಡಿದ್ದಾರೆ.
ಶುಕ್ರವಾರ ತಡರಾತ್ರಿ ಘಟನೆ ಸಂಭವಿಸಿದೆ.
ಶನಿವಾರ ಮುಂಜಾನೆ ರೈತರಿಂದ ಘಟನೆ ಬೆಳಕಿಗೆ ಬಂದಿದೆ.
ಎಚ್.ಡಿ.ಕೋಟೆ-ಸರಗೂರು ತಾಲೋಕಿನ ಕುಂದೂರು ಹೊರವಲಯದ ಜಮೀನಿನಲ್ಲಿ ಘಟನೆ ನಡೆದಿದೆ.
ಘಟನೆ ಸಂಭವಿಸಿ ಗಾಯಾಳು ಸರಗೂರು ಮತ್ತು ಎಚ್.ಡಿ.ಕೋಟೆ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.ಘಟನೆ ನಡೆದು ಗಂಟೆಗಳೇ ಉರುಳಿದರೂ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡದ ಬಗ್ಗೆ ರೈತರು ಆಕ್ರೋಷ ವ್ಯಕ್ತಪಡಿಸಿದ್ದಾರೆ…