ದೇವನೂರು ಗ್ರಾಮದಲ್ಲಿ ಅನಧಿಕೃತ ಮನೆಗಳ ಮಾಲೀಕರಿಗೆ ನೋಟೀಸ್ ಜಾರಿ …ತಹಸೀಲ್ದಾರ್ ಗಿರೀಶ್ ನೇತೃತ್ವದಲ್ಲಿ ಕಾರ್ಯಾಚರಣೆ…
- TV10 Kannada Exclusive
- September 2, 2023
- No Comment
- 193
ದೇವನೂರು ಗ್ರಾಮದಲ್ಲಿ ಅನಧಿಕೃತ ಮನೆಗಳ ಮಾಲೀಕರಿಗೆ ನೋಟೀಸ್ ಜಾರಿ …ತಹಸೀಲ್ದಾರ್ ಗಿರೀಶ್ ನೇತೃತ್ವದಲ್ಲಿ ಕಾರ್ಯಾಚರಣೆ…
ಮೈಸೂರು,ಸೆ2,Tv10 ಕನ್ನಡ
ಅಜ್ಮೇರಾ ಗ್ರೂಪ್ ವಂಚನೆ ಪ್ರಕರಣಕ್ಕೆ ಸಂಭಂಧಿಸಿದಂತೆ ವಶಪಡಿಸಿಕೊಳ್ಳಲಾದ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಮನೆಗಳ ಮಾಲೀಕರಿಗೆ ಇಂದು ನೋಟೋಸ್ ಜಾರಿ
ಮಾಡಲಾಯಿತು.ದೇವನೂರು ಗ್ರಾಮದ ಸರ್ವೆ ನಂ 194 ರಲ್ಲಿ ನಿರ್ಮಿಸಲಾದ ಸುಮಾರು 15 ಕ್ಕೂ ಹೆಚ್ಚು ಅನಧಿಕೃತ ಮನೆಗಳ ಮೇಲೆ ಕಾನೂನು ಕ್ರಮ ಜರುಗಿಸಲು ತಾಲೂಕು ಆಡಳಿತ ಮುಂದಾಗಿದೆ. ಅಜ್ಮೇರಾ ಗ್ರೂಪ್ ವಂಚನೆ ಪ್ರಕರಣದಲ್ಲಿ ಎಚ್ಚೆತ್ತ ಸರ್ಕಾರ ಈ ಹಿಂದೆ ಜಮೀನುಗಳನ್ನ
ವಶಪಡಿಸಿಕೊಂಡಿತ್ತು.ಸದರಿ ಜಮೀನಿನಲ್ಲಿ ಅನಧಿಕೃತವಾಗಿ ಮನೆಗಳನ್ನ ನಿರ್ಮಿಸಲಾಗಿದೆ.ಸದರಿ ಮನೆಗಳಲ್ಲಿರುವ ನಿವಾಸಿಗಳು ಖಾಲಿ ಮಾಡಲು ಈ ಹಿಂದೆ ನೋಟೀಸ್ ಜಾರಿ ಮಾಡಲು ಯತ್ನಿಸಿದಾಗ ತೀವ್ರ ವಿರೋಧ ವ್ಯಕ್ತವಾಗಿತ್ತು.ಇದೀಗ ಸೂಕ್ತ ಪೊಲೀಸ್ ಬಂದೋ ಬಸ್ತ್ ನಲ್ಲಿ ನೋಟೀಸ್ ಜಾರಿ ಮಾಡುವ ಕಾರ್ಯಾಚರಣೆಯನ್ನ ತಹಸೀಲ್ದಾರ್ ಗಿರೀಶ್ ಯಶಸ್ವಿಗೊಳಿಸಿದ್ದಾರೆ.ಕಾರ್ಯಾಚರಣೆಯಲ್ಲಿ ಉಪತಾಸಿಲ್ದಾರ್ ವಿಶ್ವನಾಥ್ ರಾಜಸ್ವ ನಿರೀಕ್ಷಕರಾದ ರಾಘವೇಂದ್ರ ನಾಯಕ,ಮಹದೇವು,ನಾಗರಾಜ್,ಲಕ್ಷ್ಮೀನಾರಾಯಣ್,ಗ್ರಾಮ ಲೆಕ್ಕಿಗರಾದ ಕುಟ್ಟಪ್ಪ,ವಿನೋದ್,ಪ್ರದೀಪ್,ರವಿಕುಮಾರ್,ನಾಗೇಶ್,ಅಜೀಮ್ ಖಾನ್,ಭಾಸ್ಕರ್,ಮಹೇಶ್, ಗಿರೀಶ್ ಸೇರಿದಂತೆ ಇತರರು ಭಾಗವಹಿಸಿದ್ದರು…