
ಆಟೋ ಚಾಲಕನ ಸಮಯಪ್ರಜ್ಞೆ…ತಪ್ಪಿಸಿಕೊಂಡಿದ್ದ ಬಾಲಕ ರಕ್ಷಣೆ…ದೇವರಾಜ ಠಾಣೆ ಪೊಲೀಸರಿಂದ ಅಭಿನಂದನೆ…
- TV10 Kannada Exclusive
- September 12, 2023
- No Comment
- 242
ಮೈಸೂರು,ಸೆ12,Tv10 ಕನ್ನಡ
ಮನೆಯಿಂದ ತಪ್ಪಿಸಿಕೊಂಡು ಅಳುತ್ತಾ ನಿಂತಿದ್ದ ಬಾಲಕನೋರ್ವನನ್ನ ಆಟೋ ಚಾಲಕರೊಬ್ಬರು ರಕ್ಷಿಸಿದ ಘಟನೆ ಮೈಸೂರಿನ ನಗರ ಬಸ್ ನಿಲ್ದಾಣದ ಬಳಿ ನಡೆದಿದೆ.ಆಟೋಚಾಲಕನ ಸಮಯಪ್ರಜ್ಞೆಗೆ ದೇವರಾಜ ಠಾಣೆ ಪೊಲೀಸರು ಅಭಿನಂದಿಸಿದ್ದಾರೆ.ಮನೆಯಿಂದ ತಪ್ಪಿಸಿಕೊಂಡು ಬಂದಿದ್ದ ಬಾಲಕ ಪೋಷಕರನ್ನ ಸೇಫ್ ಆಗಿ ಸೇರಿದ್ದಾನೆ.
ರಕ್ಷಣೆಗೆ ಒಳಗಾದ ಬಾಲಕ ಬೆಳಗಾವಿಯ ಶಿವರಾಜ್ ಮಹಾಲಿಂಗ್ ಮೇಲಮಟ್ಟಿ(14).ಬಾಲಕನ ರಕ್ಷಣೆಗೆ ಬಂದವರು ಆಟೋಚಾಲಕ ಹರೀಶ್ ಕುಮಾರ್. ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಮೈಸೂರು ನಗರ ಬಸ್ ನಿಲ್ದಾಣ ದ ಬಳಿ ಬಾಲಕ ಶಿವರಾಜ್ ಮಹಾಲಿಂಗ್ ಅಳುತ್ತ ನಿಂತಿದ್ದ.ಇದನ್ನ ಗಮನಿಸಿದ ಆಟೋ ಚಾಲಕ ಹರೀಶ್ ಕುಮಾರ್ ಬಾಲಕನ ವಿಚಾರ ಮಾಡಿ ಆತನ ಹೆಸರು ವಿಳಾಸ ಕೇಳಿದಾಗ ತಂದೆ ಹೆಸರು ಮಹಾಲಿಂಗ ಮೇಲಮಟ್ಟಿ, ಹಿಡಕಲ್ ಡ್ಯಾಮ್, ಬೆಳಗಾವಿ ಎಂದು ಹೇಳಿದ್ದಾನೆ.ಆಕಸ್ಮಿಕವಾಗಿ ಮನೆಯಿಂದ ತಪ್ಪಿಸಿಕೊಂಡು ಬಂದಿದ್ದ ಬಗ್ಗೆ ಖಚಿತಪಡಿಸಿಕೊಂಡ ಹರೀಶ್ ಕುಮಾರ್ ಕೂಡಲೇ ಮುತುವರ್ಜಿ ವಹಿಸಿ ಬಾಲಕನಿಗೆ ನೆನಪಿದ್ದ ಫೋನ್ ನಂಬರ್ ಗೆ ಕರೆ ಮಾಡಿ ಮಾಹಿತಿ ತಿಳಿಸಿ ನಂತರ ದೇವರಾಜ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ. ನಂತರ ಬೆಳಗಾವಿ ಯ ಹುಕ್ಕೇರಿ ತಾಲ್ಲೂಕಿನ ಯಮಕನ ಮರಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ.ಮಾಹಿತಿ ತಿಳಿದ ಬಾಲಕನ ಮಾವ ನೀಲಕಂಠ ಪೋಡಿ ದೇವರಾಜ ಠಾಣೆಗೆ ಬಂದು ಶಿವರಾಜ್ ನ ಕರೆದೊಯ್ದಿದ್ದಾರೆ. ಮಗ ತಪ್ಪಿಸಿಕೊಂಡು ಕಂಗಾಲಾಗಿದ್ದ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆಟೋ ಚಾಲಕ ಹರೀಶ್ ಕುಮಾರ್ ನ ಸಮಯ ಪ್ರಜ್ಞೆ ಗೆ ಬಾಲಕನ ಕುಟುಂಬಸ್ಥರು, ದೇವರಾಜ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಟಿ. ಬಿ. ಶಿವಕುಮಾರ್ ಹಾಗೂ ಪಿ ಎಸ್ ಐ- ಜೈ ಕೀರ್ತಿ ರವರುಗಳು ಅಭಿನಂದಿಸಿದ್ದಾರೆ.
ಎರಡು ದಿನಗಳ ಹಿಂದೆ ಟ್ಯೂಷನ್ ಗಾಗಿ ಮನೆ ಬಿಟ್ಟ ಬಾಲಕ ಆಕಸ್ಮಿಕವಾಗಿ ಬೆಳಗಾವಿ ಬಸ್ ಹತ್ತಿ ಗೊಂದಲಕ್ಕೆ ಸಿಲುಕಿದ್ದಾನೆ.ಸೂಕ್ತ ಮಾಹಿತಿ ಇಲ್ಲದೆ ಮೈಸೂರಿಗೆ ಬರುವ ಟ್ರೈನ್ ಹತ್ತಿದ್ದಾನೆ.ಮೈಸೂರಿಗೆ ಬಂದಿಳಿದ ನಂತರ ದಾರಿ ಕಾಣದೆ ಬಸ್ ನಿಲ್ದಾಣದ ಬಳಿ ಅಳುತ್ತಾ ನಿಂತಿದ್ದಾಗ ಆಟೋಚಾಲಕ ಹರೀಶ್ ಕುಮಾರ್ ನೆರವಿಗೆ ಬಂದಿದ್ದಾರೆ…