ಕುವೆಂಪುನಗರ ಪೊಲೀಸರ ಕಾರ್ಯಾಚರಣೆ…ಕಾರಿನಚಕ್ರ ಕಳುವು ಮಾಡುತ್ತಿದ್ದ 3 ಆರೋಪಿಗಳ ಬಂಧನ…
- Crime
- September 12, 2023
- No Comment
- 486
ಮೈಸೂರು,ಸೆ12,Tv10 ಕನ್ನಡ
ಕುವೆಂಪುನಗರ ಠಾಣಾ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಮೂವರು ಕಾರುಚಕ್ರಗಳ ಕಳುವು ಆರೋಪಿಗಳನ್ನ ಬಂಧಿಸಲಾಗಿದೆ.ಬಂಧಿತರಿಂದ 2.56 ಲಕ್ಷ ಮೌಲ್ಯದ 12 ಕಾರಿನ ಚಕ್ರಗಳು,3 ದ್ವಿಚಕ್ರ ವಾಹನಗಳು ಹಾಗೋ ಒಂದು ಮಾರುತಿ ವ್ಯಾನ್ ವಶಪಡಿಸಿಕೊಳ್ಳಲಾಗಿದೆ.
ಸಿದ್ದಿಕ್(24),ಶಾರುಖ್ ಖಾನ್(25) ಹಾಗೂ ಸೆಕ್ಲೆನ್ ಮುಷ್ತಾಕ್ (24) ಬಂಧಿತರು.ಯೂನಿವರ್ಸಿಟಿ ಲೇಔಟ್ ನಲ್ಲಿ ಖೈಸರ್ ಜಹನ್ ಬೇಗಂ ಎಂಬುವರಿಗೆ ಸೇರಿದ ಕಾರುಗಳ ಚಕ್ರಗಳನ್ನ ಆರೋಪಿಗಳು ಕಳುವು ಮಾಡಿದ್ದರು.ಈ ಕುರಿತಂತೆ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಆರೋಪಿಗಳ ಸೆರೆಗೆ
ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಜಾಹ್ನವಿ ರವರ ಮಾರ್ಗದರ್ಶನದಲ್ಲಿ ಕೆ.ಆರ್.ವಿಭಾಗದ ಎಸಿಪಿ ಗಂಗಾಧರಸ್ವಾಮಿ ಉಸ್ತುವಾರಿಯಲ್ಲಿ ಕುವೆಂಪುನಗರ ಠಾಣೆ ಇನ್ಸ್ಪೆಕ್ಟರ್ ಅರುಣ್ ನೇತೃತ್ವದಲ್ಲಿ ಪಿಎಸ್ಸೈಗಳಾದ ಗೋಪಾಲ್,ಕು.ರಾಧ ಹಾಗೂ ಸಿಬ್ಬಂದಿಗಳಾದ ಆನಂದ್,ಮಂಜುನಾಥ್,ಹಜರತ್,ಪುಟ್ಟಪ್ಪ,ಸುರೇಶ್,ನಾಗೇಶ್,ಅಮೋಘ್,ಕುಮಾರ್ ರವರನ್ನೊಳಗೊಂಡ ತಂಡ ರಚನೆಯಾಗಿತ್ತು.ಅಲರ್ಟ್ ಆದ ತಂಡ ಆರೋಪಿಗಳನ್ನ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಕಾರು ಚಕ್ರಗಳ ಕಳುವು ಪ್ರಕರಣ ಹಾಗೂ ಆಲನಹಳ್ಳಿ ಪೊಲೀಸ್ ಠಾಣೆಯ ಒಂದು ಕಾರು ಚಕ್ರಗಳ ಕಳುವು ಪ್ರಕರಣ ಪತ್ತೆಯಾಗಿದೆ.ಇದೇ ಆರೋಪಿಗಳು ಬೆಂಗಳೂರಿನ ಹೆಚ್.ಎಸ್.ಆರ್.ಲೇಔಟ್ ಪೊಲೀಸ್ ಠಾಣೆಯಲ್ಲಿ ಒಂದು ಹಾಗೂ ಮೈಸೂರು ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ದ್ವಿಚಕ್ರ ವಾಹನ ಕಳುವು ಮಾಡಿರುವುದು ಪತ್ತೆಯಾಗಿದೆ.ಈ ಬಗ್ಗೆ ನಗರಪೊಲೀಸ್ ಆಯುಕ್ತ ಡಾ.ಬಿ.ರಮೇಶ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.ಕುವೆಂಪುನಗರ ಪೊಲೀಸರ ಯಶಸ್ವಿ ಕಾರ್ಯಾಚರಣೆಯನ್ನ ಡಿಸಿಪಿ ಮುತ್ತುರಾಜ್ ಪ್ರಶಂಸಿಸಿದ್ದಾರೆ…