ತಹಸೀಲ್ದಾರ್ ಆದೇಶಕ್ಕೆ ಡೋಂಟ್ ಕೇರ್…ಅನುಮತಿ ಪಡೆಯದೆ ಜಲಕ್ರೀಡೆ…ಸ್ಥಳೀಯರ ಆಕ್ರೋಷ…
- TV10 Kannada Exclusive
- September 16, 2023
- No Comment
- 451


ತಹಸೀಲ್ದಾರ್ ಆದೇಶಕ್ಕೆ ಡೋಂಟ್ ಕೇರ್…ಅನುಮತಿ ಪಡೆಯದೆ ಜಲಕ್ರೀಡೆ…ಸ್ಥಳೀಯರ ಆಕ್ರೋಷ…

ಮಂಡ್ಯ,ಸೆ16,Tv10 ಕನ್ನಡ


ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಬೋರೆದೇವರ ದೇವಸ್ಥಾನದ ಬಳಿ ಸಂಭಂಧಪಟ್ಟ

ಯಾವುದೇ ಇಲಾಖೆ ಪೂರ್ವಾನುಮತಿ ಪಡೆಯದೆ ಕಾವೇರಿ ನದಿಯಲ್ಲಿ ಜಲಕ್ರೀಡೆ ನಡೆಯುತ್ತಿದೆ.ಈ ಕುರಿತಂತೆ ಸ್ಥಳೀಯರು ನೀಡಿದ ದೂರಿನನ್ವಯ ಜಿಲ್ಲಾಡಳಿತ ಇಲ್ಲಿ ಕ್ರೀಡೆ ನಡೆಸದಂತೆ ಆದೇಶ ಹೊರಡಿಸಿದ್ದರೂ ಡೋಂಟ್ ಕೇರ್ ಎಂದು ಜಲಕ್ರೀಡೆ ಆಯೋಜಿಸಿ ನಿಯಮಗಳನ್ನ ಉಲ್ಲಂಘಿಸಿರುವ ಆರೋಪ ಕೇಳಿ ಬಂದಿದೆ.ಕಳೆದ ಎರಡು ಮೂರು ದಿನಗಳಿಂದ ನಿರಂತರವಾಗಿ ಕ್ರೀಡೆಗಳು ನಡೆಯುತ್ತಿದ್ದರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ ಎಂಬ ಆರೋಪ ಸ್ಥಳೀಯರದ್ದು.ಸದರಿ ನದಿ ಪಾತ್ರ ಮೊಸಳೆಗಳ ಆವಾಸ ಸ್ಥಾನ ಎಂದು ಹೇಳಲಾಗಿದೆ.ಅಲ್ಲದೆ ಈಗಾಗಲೇ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವ ಹಿನ್ನಲೆ ನದಿ ರಭಸವಾಗಿ ಹರಿಯುತ್ತಿದೆ.ಹೀಗಿದ್ದೂ ಮುಂಜಾಗ್ರತೆ ಕ್ರಮ ಅನುಸರಿಸದೆ ಕ್ರೀಡೆ ನಡೆಸುತ್ತಿರುವುದು ಅಪಾಯಕಾರಿ ಎಂದು ಸ್ಥಳೀಯರ ಆರೋಪವಾಗಿದೆ.ಅನಾಹುತ ಸಂಭವಿಸುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ…

