*ಓಜೋನ್ ಪದರದ ರಕ್ಷಣೆ ನಮ್ಮೆಲ್ಲರ ಅಧ್ಯ ಕರ್ತವ್ಯ -ಅಶ್ವತ್ಥ ನಾರಾಯಣ ಗೌಡ *


ನಂಜನಗೂಡುspt16 Tv10 ಕನ್ನಡಓಜೋನ್ ಅತಿಹೆಚ್ಚು ನೇರಳಾತೀತ ಕಿರಣಗಳನ್ನು ಹೀರಿಕೊಳ್ಳುವ ಅನಿಲ ವೆಂದು ತಿಳಿದು ಬಂದಿದ್ದರು ಸಹ ಓಝೋನ್ ಪದರದ ಬಗ್ಗೆ ನಿರಂತರವಾಗಿ ದಿವ್ಯ ನಿರ್ಲಕ್ಷ್ಯ ಮುಂದುವರಿಯುತ್ತದೆ. ಇನ್ನು ಮುಂದಾದರೂ ನಾವು ಎತ್ತುಕೊಳ್ಳದಿದ್ದಲ್ಲಿ ಪರಿಸರ ಸಮತೋಲನ ಕಳೆದು ಹೋಗಿ ಭೂಮಿಯು ಬರಡಾಗಿ ಮನುಷ್ಯ ಹಲವು ರೋಗಗಳಿಗೆ ತುತ್ತಾಗಿ ಜೀವ ವೈವಿಧ್ಯಗಳು ನಾಶವಾಗುವ ಸಾಧ್ಯತೆ ಹೆಚ್ಚು ಎಂದು ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಹಸಿರು ಪಡೆ ಮತ್ತು ವಿಜ್ಞಾನ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಓಜೋನ್ ದಿನಾಚರಣೆಯ ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕರಾದ ಅಶ್ವಥ್ ನಾರಾಯಣಗೌಡರವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಭೌತಶಾಸ್ತ್ರ ಉಪನ್ಯಾಸಕರಾದ ನಾಗರಾಜ ರೆಡ್ಡಿ ಓಝೋನ್ ಪದರವು ಕರಗಲು ಮುಖ್ಯ ಕಾರಣ ಪರಿಸರ ವಿರೋಧಿ ಕೈಗಾರಿಕೆಗಳು. ಇವುಗಳಿಗೆ ಹೆಚ್ಚು ಹೊತ್ತು ನೀಡುವುದರಿಂದ ಇಂತಹ ಕಾರ್ಖಾನೆಗಳಿಂದ ಹೊರಹೊಮ್ಮುವ ವಿಷಕಾರಣ ಅನಿಲಗಳು , ವಾಹನಗಳಿಂದ ಹೊಗೆ, ಹವಾ ನಿಯಂತ್ರಕ ಯಂತ್ರಗಳಿಂದ ಹೊರಸೂಸುವ ವಿಷಾನಿಲ, ಶಿತಲೀಕರಣ ಯಂತ್ರದಿಂದ ಹೊರಹೊಮ್ಮುವ ಅನಿಲಗಳಾದ ಮಿಥೇನ್ , ಕಾರ್ಬನ್ ಮೋನಾಕ್ಸೈಡ್ ಮುಂತಾದ ಅನಿಲಗಳು ಓಝೋನ್ ಪದರವನ್ನು ತೆಳುವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ .
ತಾಲೂಕು ಸರ್ಕಾರಿ ನೌಕರರ ಅಧ್ಯಕ್ಷರಾದ ರಂಗಸ್ವಾಮಿಯವರು ಮಾತನಾಡಿ ಓಝೋನ್ ಪದರವು ಕೇವಲ ಭೂಮಿಯನ್ನು ಸೂರ್ಯನ ಶಾಖದಿಂದ ರಕ್ಷಿಸುವ ಕೊಡೆ ಮಾತ್ರವಲ್ಲ ಇಡೀ ಭೂಮಂಡಲದ ಜೀವ ಸಂಕುಲವನ್ನು ರಕ್ಷಿಸುವ ಪದರವಾಗಿ ಕೆಲಸ ಮಾಡುತ್ತದೆ.
ವಿದ್ಯಾರ್ಥಿ ಸಂಜನಾ ಮಾತನಾಡಿ ಮುಂದಿನ ತಲೆಮಾರಿಗೆ ಆರೋಗ್ಯದ ಬದುಕಲು ಯೋಗ್ಯವಾದ ಭೂಮಿಯನ್ನು ಕೊಡುವುದು ನಮ್ಮೆಲ್ಲರ ಜವಾಬ್ದಾರಿ ಹಾಗಾಗಿ ಈ ಓಜೋನ್ ಪದರವನ್ನು ರಕ್ಷಿಸುವ ಕಾರ್ಯ ಮಾಡಲೇಬೇಕು.
ವಿದ್ಯಾರ್ಥಿ ಧ್ಯಾನ ಮಾತನಾಡಿ ಗಿಡಗಳನ್ನು ನಡೆಸುವ ಮೂಲಕ ಸುಂದರ ಪರಿಸರವನ್ನು ಕಾಯ್ದುಕೊಳ್ಳುವ ಬಗ್ಗೆ ವಿದ್ಯಾರ್ಥಿಗಳಾದ ನಾವು ನಮ್ಮ ಮನಸ್ಸಿಗೆ ಪ್ರತಿಜ್ಞೆ ಮಾಡಿಕೊಳ್ಳಬೇಕು .
ಕಾರ್ಯಕ್ರಮದಲ್ಲಿ ಲಿಂಗಣ್ಣ ಸ್ವಾಮಿ, ದಿನೇಶ್ ,ಡಾ .ಟಿ ಕೆ ರವಿ ,ಸುಮಾ, ವಸಂತಕುಮಾರಿ ,ಸ್ವಾಮಿ ಗೌಡ , ಹರೀಶ್ ,ರಾಮನುಜಮ್ ,ಮೀನಾ ಬಿಂದು ,ಸುಮಿತ್ರಾ, ನಾಗವೇಣಿ ಉಪಸ್ಥಿತರಿದ್ದರು.

Spread the love

Related post

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…
ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ… ಮೈಸೂರು,ಸೆ10,Tv10 ಕನ್ನಡ ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ ನಡೆದಿದೆ.ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ…
ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ… ಮೈಸೂರು,ಸೆ6,Tv10 ಕನ್ನಡ ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವ್ಯಕ್ತಿಗೆ ಕಬ್ಬಿಣದ ರಾಡು ಚುಚ್ಚಿ ಸ್ಥಳದಲ್ಲೇ…

Leave a Reply

Your email address will not be published. Required fields are marked *