ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕತ್ತು ಹಿಸುಕಿ ಕೊಂದ ಪತಿರಾಯ.. ಆರೋಪಿ ಅಂದರ್…

ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕತ್ತು ಹಿಸುಕಿ ಕೊಂದ ಪತಿರಾಯ.. ಆರೋಪಿ ಅಂದರ್…

  • Crime
  • September 21, 2023
  • No Comment
  • 427

ನಂಜನಗೂಡು,ಸೆ21,Tv10 ಕನ್ನಡ

ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಗಂಡ ಪೊಲೀಸರ ಅತಿಥಿಯಾದ ಘಟನೆ ನಂಜನಗೂಡು ತಾಲೂಕಿನ ದೊಡ್ಡಹೊಮ್ಮ ಗ್ರಾಮದಲ್ಲಿ ನಡೆದಿದೆ. ರೂಪ(35) ಮೃತ ದುರ್ದೈವಿ.ಪತಿ ಪುರುಷೋತ್ತಮ್(40) ಪೊಲೀಸರ ಅತಿಥಿಯಾಗಿದ್ದಾನೆ.
ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದ ಪುರುಷೋತ್ತಮ್ ಎಂಬಾತನಿಗೆ ಕಳೆದ ಎಂಟು ವರ್ಷಗಳ ಹಿಂದೆ ದೊಡ್ಡಹೊಮ್ಮ ಗ್ರಾಮದ ರೂಪ ಜೊತೆ ವಿವಾಹ ಮಾಡಿಕೊಡಲಾಗಿತ್ತು.
ಆರು ವರ್ಷದ ಮಗುವಿದ್ದು, ಗಂಡ ಹೆಂಡತಿ ನಡುವೆ, ಕ್ಷುಲ್ಲಕ ವಿಚಾರಕ್ಕೆ ಆಗಾಗ ಗಲಾಟೆ ನಡೆಯುತ್ತಿತ್ತು.ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ.
ನನ್ನ ಮಗಳಿಗೆ ಅವಳ ಗಂಡ ಕಿರುಕುಳ ನೀಡುತ್ತಿದ್ದ. ಪದೇ ಪದೇ ಬಂದು ಜಗಳ ಆಡುತ್ತಿದ್ದ ಆತನ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ತಂದೆ ರಾಮಯ್ಯ ಕವಲಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ಪುರುಷೋತ್ತಮ್ ನ ಬಂಧಿಸಿದ್ದಾರೆ.
ಸ್ಥಳಕ್ಕೆ ಎಎಸ್ ಎಸ್ಪಿ ನಂದಿನಿ, ಡಿವೈಎಸ್ಪಿ ಗೋವಿಂದರಾಜು, ಸರ್ಕಲ್ ಇನ್ಸ್ಪೆಕ್ಟರ್ ಚಂದ್ರಶೇಖರ್, ಪಿಎಸ್ಐ ಕೃಷ್ಣಕಾಂತಕೋಳಿ, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

Spread the love

Related post

ಮೂವರು ಗುಂಡೇಟಿಗೆ ಬಲಿ ಪ್ರಕರಣ…ಬೇಟೆಗಾರರು ಎಂಬುದಕ್ಕೆ ಪುರಾವೆ…ಸಾಕ್ಷ್ಯ ಸಲ್ಲಿಸಿದ ಅರಣ್ಯ ಇಲಾಖೆ…

ಮೂವರು ಗುಂಡೇಟಿಗೆ ಬಲಿ ಪ್ರಕರಣ…ಬೇಟೆಗಾರರು ಎಂಬುದಕ್ಕೆ ಪುರಾವೆ…ಸಾಕ್ಷ್ಯ ಸಲ್ಲಿಸಿದ ಅರಣ್ಯ ಇಲಾಖೆ…

ಮೂವರು ಗುಂಡೇಟಿಗೆ ಬಲಿ ಪ್ರಕರಣ…ಬೇಟೆಗಾರರು ಎಂಬುದಕ್ಕೆ ಪುರಾವೆ…ಸಾಕ್ಷ್ಯ ಸಲ್ಲಿಸಿದ ಅರಣ್ಯ ಇಲಾಖೆ… ಚಾಮರಾಜನಗರ,ಆ17,Tv10 ಕನ್ನಡ ಚಾಮರಾಜನಗರದಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರು ಬೇಟೆಗಾರರು ಎಂಬುದಕ್ಕೆ ಅರಣ್ಯ ಇಲಾಖೆ…
ಗದಗ ನಗರದ ರೇಪ್ ಕೇಸ್…ಆರೋಪಿಗಳು ಇಬ್ಬರಲ್ಲ ನಾಲ್ವರು…

ಗದಗ ನಗರದ ರೇಪ್ ಕೇಸ್…ಆರೋಪಿಗಳು ಇಬ್ಬರಲ್ಲ ನಾಲ್ವರು…

ಗದಗ ನಗರದ ರೇಪ್ ಕೇಸ್…ಆರೋಪಿಗಳು ಇಬ್ಬರಲ್ಲ ನಾಲ್ವರು… ಗದಗ,ಆ17,Tv10 ಕನ್ನಡ ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ನಿರಂತರ ಅತ್ಯಚಾರ ನಡೆದ ಪ್ರಕರಣದಲ್ಲಿ ಆರೋಪಿಗಳ ಸಂಖ್ಯೆ ನಾಲ್ಕಕ್ಕೆ ಏರಿದೆ.ಮೂರು…
ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ…

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು ಮೈಸೂರು, ಆ.4: ಮೈಸೂರಿನ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ…

Leave a Reply

Your email address will not be published. Required fields are marked *