
ಜನತಾ ದರ್ಶನ:ಡಾ.ಹೆಚ್.ಸಿ.ಎಂ.ನೇತೃತ್ವದಲ್ಲಿ ಕಾರ್ಯಕ್ರಮ… ಅಹವಾಲುಗಳ ಸುರಿಮಳೆ…
- TV10 Kannada Exclusive
- September 25, 2023
- No Comment
- 427

ಮೈಸೂರು,ಸೆ25,Tv10 ಕನ್ನಡ

ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ಮೈಸೂರಿನ ಜಿಲ್ಲಾಪಂಚಾಯ್ತಿ ಸಭಾಂಗಣದಲ್ಲಿ ಜನತಾ ದರ್ಶನ ನಡೆಯಿತು.ಪ್ರತಿತಿಂಗಳು ಜನತಾದರ್ಶನ ನಡೆಸುವಂತೆ ಮುಖ್ಯಮಂತ್ರಿಗಳು ನೀಡಿದ್ದ ಸೂಚನೆಯಂತ

ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಸಿ ಮಹದೇವಪ್ಪ ನೇತೃತ್ವದಲ್ಲಿ ಜನತಾದರ್ಶನ ನಡೆಯಿತು.ಜನತಾ ದರ್ಶನಕ್ಕೆ ಬಹುತೇಕ ಶಾಸಕರ ನಿರಾಸಕ್ತಿ ತೋರಿದರು.
ಶಾಸಕರಾದ ತನ್ವೀರ್ ಸೇಠ್,ಹರೀಶ್ ಗೌಡ, ಶ್ರಿವತ್ಸ ಹೊರತುಪಡಿಸಿ ಉಳಿದ ಶಾಸಕರು ಗೈರಾಗಿದ್ದರು
ಕಾಂಗ್ರೆಸ್ ಶಾಸಕರಾದ ಅನಿಲ್ ಚಿಕ್ಕಮಾದು, ರವಿಶಂಕರ್,ದರ್ಶನ್ ಧ್ರುವನಾರಾಯಣ್,
ಜೆಡಿಎಸ್‌ನ ಜಿ ಟಿ ದೇವೇಗೌಡ ಜಿ ಡಿ ಹರೀಶ್ ಗೌಡ ಗೈರಾಗಿದ್ದರು.ಹಲವಾರು ಸಮಸ್ಯೆಗಳನ್ನ ಹೊತ್ತ ಸಾರ್ವಜನಿಕರು ಅಹವಾಲುಗಳನ್ನ ಸಲ್ಲಿಸಿದರು.
ಸಚಿವ ಮಹದೇವಪ್ಪ ಮುಂದೆ
ಮೈಸೂರಿನ ರಾಜೇಂದ್ರ ನಗರ ಕೆಸರೆ ನಿವಾಸಿ 83 ವರ್ಷದ ವೆಂಕಟಮ್ಮ ಕಣ್ಣೀರು ಹಾಕಿ ನನ್ನ 3 ಜನ ಗಂಡು ಮಕ್ಕಳು ಕಡೆಗಣಿಸಿದ್ದಾರೆಂದು ದೂರು ಸಲ್ಲಿಸಿದರು. ಒಂದು ಕೋಟಿ ರೂಪಾಯಿ ಆಸ್ತಿ ತೆಗೆದುಕೊಂಡಿದ್ದಾರೆ.
ನ್ಯಾಯಾಲಯ ಹೇಳಿದರೂ ನನ್ನನ್ನು ನೋಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ತಕ್ಷಣ ಎಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಕರೆದು ಅಜ್ಜಿಯ ಸಮಸ್ಯೆಯನ್ನು ಒಂದು ವಾರದಲ್ಲಿ ಬಗೆಹರಿಸುವಂತೆ ಡಿಸಿ ಡಾ ಕೆ ವಿ ರಾಜೇಂದ್ರ ಸೂಚನೆ ನೀಡಿದರು.
ಕಣ್ಣು ಕಾಣದವರ ಸಮಸ್ಯೆ ಆಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಸಿ ಮಹದೇವಪ್ಪ
ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸುತ್ತೇನೆ.
ಇಲ್ಲವಾದರೆ ಮುಂದಿನ ಚುನಾವಣೆಯಲ್ಲಿ ನನ್ನನ್ನು ಸೋಲಿಸಿ ಎಂದು
ಜನತಾದರ್ಶನದಲ್ಲಿ ಡಾ ಎಚ್ ಸಿ ಮಹದೇವಪ್ಪ ಭರವಸೆ ನೀಡಿದರು.ವರ್ಗಾವಣೆ,ಆಶ್ರಯಕ್ಕಾಗಿ ಸೂರು,ನೀರಿನ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಅಹವಾಲು ದಾಖಲಾಯಿತು. ಜನತಾದರ್ಶನಕ್ಕೆ
ಗೈರಾದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡುವಂತೆ ಡಾ ಎಚ್ ಸಿ ಮಹದೇವಪ್ಪ ರವರು
ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರಗೆ ಸೂಚಿದರು…

