
ಮೈಸೂರು:ಮಾಧವಕೃಪಾದಲ್ಲಿ ವರುಣನಿಗಾಗಿ ಪ್ರಾರ್ಥನೆ…20 ಯತಿಗಳಿಂದ ವಿಶೇಷ ಪೂಜೆ…
- TV10 Kannada Exclusive
- September 24, 2023
- No Comment
- 179

ಮೈಸೂರು,ಸೆ24,Tv10 ಕನ್ನಡ
ಒಂದೆಡೆ ಕಾವೇರಿ ನೀರಿಗಾಗಿ ಹೋರಾಟ ಮುಂದುವರೆದಿದೆ.ಮತ್ತೊಂದೆಡೆ ವರುಣನಿಗಾಗಿ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.
ಮೈಸೂರಿನ ಲಕ್ಷ್ಮೀಪುರಂನಲ್ಲಿರುವ ಮಾಧವಕೃಪಾದಲ್ಲಿ ಮಳೆಗಾಗಿ ಸಂಕಲ್ಪ ಪೂಜೆ ನೆರವೇರಿಸಲಾಗಿದೆ.
ಸುಮಾರು 20 ಯತಿಗಳು ವರುಣ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
ಗಣೇಶ್ ಅವರ ನೇತೃತ್ವದಲ್ಲಿ ವರುಣನಿಗೆ ಪೂಜೆ ಸಲ್ಲಿಸಲಾಗಿದೆ.
ಮಾಧವಕೃಪದಲ್ಲಿ ಪ್ರತಿಷ್ಠಾಪನೆ ಮಾಡಿರುವ ವಿಶೇಷ ಗಣಪನ ಬಳಿ ಪೂಜೆ ನೆರೆವೇರಿಸಲಾಗಿದೆ.
ಚಂದ್ರಯಾನ 3ರ ಯಶೋಗಾಥೆ ಬಿಂಬಿಸುವ ಗಣಪನ ಪ್ರತಿಷ್ಠಾಪನೆ
ವಿಕ್ರಮ ಲ್ಯಾಂಡರ್ ಶಿವಶಕ್ತಿ ಪಾಯಿಂಟ್ ಪ್ರಜ್ಞ್ಯಾನ್ ರೋವರ್ ನಿರ್ಮಾಣ ಮಾಡಲಾಗಿದೆ.
ಚಂದ್ರಗ್ರಹದ ಮೇಲೆ ವಿರಾಜಮಾನರಾಗಿರುವ ವಿಘ್ನನಿವಾರಕನ ಮುಂದೆ ಯತಿಗಳು
ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಮಾಡಿದ್ದಾರೆ…