
*ನದಿಗಳ ಸಂರಕ್ಷಣೆ ಇಂದು ತೀರಾ ಅಗತ್ಯ-ರಂಗಸ್ವಾಮಿ ಅಭಿಮತ:
- TV10 Kannada Exclusive
- September 25, 2023
- No Comment
- 246
ನಂಜನಗೂಡು:
ನದಿಗಳ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಮಾನವನ ಕ್ರಿಯೆಗಳಿಂದ ಅದು ಹೇಗೆ ಅವನತಿ ಹೊಂದುತ್ತಿದೆ . ಮತ್ತು ಅದನ್ನು ಹೇಗೆ ಸರಿಪಡಿಸಲು ಕೈಗೊಳ್ಳ ಬೇಕಾದ ಕಾರ್ಯಕ್ರಮಗಳು ಇಂದು ತೀರಾ ಅಗತ್ಯವಿದೆ ಎಂದು ಉಪನ್ಯಾಸಕ ಶ್ರೀ ರಂಗಸ್ವಾಮಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು .ಅವರು ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ನದಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಉದ್ಘಾಟನಾ ಭಾಷಣದಲ್ಲಿ ಹೇಳಿದರು.
ತಮ್ಮಅಧ್ಯಕ್ಷೀಯ ಭಾಷಣದಲ್ಲಿ ನೀರಿನ ಮಹತ್ವದೊಟ್ಟಿಗೆ ಬರಗಾಲ ಎದುರಾಗಿ ಸಮಸ್ಯೆ ಉಲ್ಬಣವಾದಗ ಮಾತ್ರ ನಮಗೆ ನೀರಿನ ಮಹತ್ವ ನೆನಪಾದರೆ ಸಾಲದು .ನೀರು ಮುಂದಿನ ತಲೆಮಾರಿಗು ಅಗತ್ಯವಿರುವುದರಿಂದ ನದಿಗಳನ್ನು ರಕ್ಷಿಸುವುದು ನಮ್ಮೆಲ್ಲರ ಅದ್ಯ ಕರ್ತವ್ಯ ಎಂದು ಕಾಲೇಜಿನ ಪ್ರಾಂಶುಪಾಲರಾದ ಲಯನ್ ಸಿ.ಆರ್ .ದಿನೇಶ್ ತಿಳಿಸಿದರು ಭೂಗೋಳಶಾಸ್ತ್ರ ಉಪನ್ಯಾಸಕ ಶ್ರೀ ಮಲ್ಲಿಕಾರ್ಜುನ ನದಿ ನೀರಿನ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ.ಶಿವಪ್ರಸಾದ್ ರಾಹುಲ್, ನಂದಿನಿ ರವರ ಪುಟ್ಟ ಭಾಷಣ ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರಾದ ಅಶ್ವಥ್ ನಾರಾಯಣ ಗೌಡ, ಲಿಂಗಣ್ಣ ಸ್ವಾಮಿ, ಮಾಲತಿ , ಸದಾನಂದ,ಸ್ವಾಮಿ ಗೌಡ ಇತರರು ಹಾಜರಿದ್ದರು.