ದಸರಾ 2023: ಎರಡನೇ ತಂಡದಲ್ಲಿ 6 ಆನೆಗಳು ಆಗಮನ…
- TV10 Kannada Exclusive
- September 25, 2023
- No Comment
- 336

ದಸರಾ 2023: ಎರಡನೇ ತಂಡದಲ್ಲಿ 6 ಆನೆಗಳು ಆಗಮನ…

ಮೈಸೂರು,ಸೆ25,Tv10 ಕನ್ನಡ

ದಸರಾ ಮಹೋತ್ಸವದಲ್ಲಿ ಭಾಗಿಯಾಗಲು ಎರಡನೇ ತಂಡದ ಆನೆಗಳು ಅರಮನೆಗೆ ಆಗಮಿಸಿವೆ.ಆರು ಆನೆಗಳು ಆಗಮಿಸಿದ್ದು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಸ್ವಾಗತಿಸಲಾಗಿದೆ.ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಮಪುರ ಆನೆ ಶಿಬಿರದಿಂದ ರೋಹಿತ್ ಹಾಗೂ ಹಿರಣ್ಯ,ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ದೊಡ್ಡಹರವೆ ಆನೆ ಶಿಬಿರದಿಂದ ಲಕ್ಷ್ಮಿ ಹಾಗೂ ಮಡಿಕೇರಿಯ ದುಬಾರೆ ಶಿಬಿರದಿಂದ ಪ್ರಶಾಂತ್,ಸುಗ್ರೀವ ಎರಡನೇ ತಂಡದಲ್ಲಿ ಬಂದ ಆನೆಗಳಾಗಿವೆ.ಕ್ಯಾಪ್ಟನ್ ಅಭಿಮನ್ಯು ತಂಡವನ್ನ ಸೇರಿಕೊಂಡ ಆನೆಗಳು ನಾಳಿನಿಂದಲೇ ತಾಲೀಮಿನಲ್ಲಿ ಭಾಗವಹಿಸಲಿವೆ…