ಕೇರಳಾಕ್ಕೆ ಸಾಗಿಸಲಾಗುತ್ತಿದ್ದ 100 ಕ್ಕೂ ಹೆಚ್ಚು ರಾಸುಗಳ ರಕ್ಷಣೆ…ಅಂತರಸಂತೆ ಪೊಲೀಸರ ಕಾರ್ಯಾಚರಣೆ…
- Crime
- September 27, 2023
- No Comment
- 406
ಹೆಚ್.ಡಿ.ಕೋಟೆ,ಸೆ27,Tv10 ಕನ್ನಡ
ಕೇರಳಾ ರಾಜ್ಯಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 100 ಕ್ಕೂ ಹೆಚ್ಚು ರಾಸುಗಳನ್ನ ರಕ್ಷಣೆ
ಮಾಡಲಾಗಿದೆ.ಹೆಚ್.ಡಿ.ಕೋಟೆ ತಾಲೂಕು ಅಂತರಸಂತೆಯಲ್ಲಿ ಘಟನೆ ನಡೆದಿದೆ.ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಅಂತರಸಂತೆ ಠಾಣೆ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.ಸ್ಥಳೀಯರು ನೀಡಿದ ಮಾಹಿತಿಯನ್ನ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ.2 ಕಂಟೈನರ್ ಹಾಗೂ 5 ಬೊಲೆರೋ ವಾಹನಗಳಲ್ಲಿ ಸಾಗಿಸಲಾಗುತ್ತಿದ್ದ ವೇಳೆ ದಾಳಿ ನಡೆಸಿದ್ದಾರೆ.ಬ್ಯಾರಿಕೇಡ್ ಗಳನ್ನ ಅಳವಡಿಸಿ ಪೊಲೀಸರು ದಾಳಿ ನಡೆಸಿದ ವೇಳೆ ಆರೋಪಿಗಳು ಪರಾರಿ ಆಗಲು ಯತ್ನಿಸಿದ್ದಾರೆ.ಬದಯಾರಿಕೇಡ್ ಗಳ ಮೇಲೇ ವಾಹನ ಚಲಾಯಿಸಿ ಎಸ್ಕೇಪ್ ಆಗಲು ಯತ್ನಿಸಿದಾಗ ಪೊಲೀಸರು ಸಿನಮೀಯ ರೀತಿಯಲ್ಲಿ ಚೇಸ್ ಮಾಡಿ ವಾಹನಗಳನ್ನ ವಶಕ್ಕೆ ಪಡೆದಿದ್ದಾರೆ.ಇಬ್ಬರು ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಈದ್ ಮಿಲಾದ್ ಹಬ್ಬ ಹಿನ್ನಲೆ ರಾಸುಗಳನ್ನ ಕೇರಳಾಕ್ಕೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.ಹಸು,ಎಮ್ಮ,ಕರುಗಳು ಸೇರಿದಂತೆ ನೂರಾರು ರಸುಗಳನ್ನ ರಕ್ಷಿಸಲಾಗಿದೆ.ಕೆಲವು ಹಸು ಹಾಗೂ ಎಮ್ಮೆಗಳು ನಿತ್ರಾಣಗೊಂಡ ಪರಿಸ್ಥಿತಿಯಲ್ಲಿ ಕಂಡು ಬಂದಿವೆ.ರಕ್ಷಿಸಲಾದ ರಾಸುಗಳನ್ನ ಮೈಸೂರಿನ ಪಿಂಜರಾಪೋಲ್ ಸಂಸ್ಥೆಗೆ ರವಾನಿಸಲು ಪೊಲೀಸರು ಸಿದ್ದತೆ ನಡೆಸಿದ್ದಾರೆ.ಅಂತರಸಂತೆ ಠಾಣೆ ಪೊಲೀಸರು ಆರೋಪಿಗಳನ್ನ ವಿಚಾರಣೆಗೆ ಒಳಪಡಿಸಿದ್ದಾರೆ…