ಪೊಲೀಸರು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು…ಸಿ ಎಂ.ಸಿದ್ದರಾಮಯ್ಯ…
- TV10 Kannada Exclusive
- September 26, 2023
- No Comment
- 292
ಮೈಸೂರು,ಸೆ26,Tv10 ಕನ್ನಡ
ಪೊಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಜನಸ್ನೇಹಿ ಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಕರೆ ನೀಡಿದರು
ಇಂದು ಪೊಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿದ್ದ 37 ನೇ ತಂಡದ ಪತ್ರಾಂಕಿತ ಪ್ರಶಿಕ್ಷಣಾರ್ಥಿಗಳ ನಿರ್ಗಮಿತ ಪಥ ಸಂಚಲನ
ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳಿಂದ ಅವರು ಪಥ ಸಂಚಲನ ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು. ಕರ್ನಾಟಕ ಪೊಲೀಸ್ ಅಕಾಡೆಮಿ ಪ್ರತಿಷ್ಠಿತ ತರಬೇತಿ ನೀಡುವ ಅಕಾಡೆಮಿಯಾಗಿದೆ. ತರಬೇತಿ ಸಂದರ್ಭದಲ್ಲಿ ದೈಹಿಕವಾಗಿ ಸದೃಡವಾಗುವ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನು ತಿಳಿಸಲಾಗುತ್ತದೆ. ತರಬೇತಿಯ ನಂತರ ನೀವು ಸಮಾಜ ಸೇವೆಗೆ ತೆರಳುತ್ತೀರಿ. ರಾಜಕಾರಣಿಗಳು ಹಾಗೂ ಸರ್ಕಾರಿ ನೌಕರರು ಸಮಾಜ ಸೇವಕರು. ನಾವು ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.ಜನರು ನಮ್ಮ ನಿಮ್ಮ ಮೇಲೆ ವಿಶ್ವಾಸ ಇಟ್ಟುಕೊಂಡಿರುತ್ತಾರೆ. ಕಾನೂನಿನ ಅಡಿಯಲ್ಲಿ ಜನರ ವಿಶ್ವಾಸ
ಗಳಿಸಬೇಕು.ಪೊಲೀಸ್ ಇಲಾಖೆಯಲ್ಲಿ ಕ್ಲಿಷ್ಟ ಪರಿಸ್ಥಿಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ ಆದರೂ ತಾಳ್ಮೆ ಕಳೆದು ಕೊಳ್ಳದೆ ಶಾಂತ ರೀತಿಯಿಂದ ಕಾರ್ಯ ನಿರ್ವಹಿಸಬೇಕು. ಯಾವುದೇ ಲಾಬಿಗೆ ಒಳಗಾಗದೆ ನ್ಯಾಯ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಪ್ರತಿಯೊಬ್ಬ ವ್ಯಕ್ತಿಗೂ ನ್ಯಾಯ ರೀತಿಯಲ್ಲಿ ಬದುಕುವ ಹಕ್ಕು ಇರುತ್ತದೆ. ಇದಕ್ಕೆ ಧಕ್ಕೆ ಆಗಬಾರದು. ನಮ್ಮ ಸಮಾಜದಲ್ಲಿ ಹಲವು ಜಾತಿ, ಧರ್ಮದ ಜನರು ವಾಸಿಸುತ್ತಿದ್ದಾರೆ. ಯಾವ ವರ್ಗದವರೂ ಸಹ ದುರ್ಬಲ ವರ್ಗದವರ ಮೇಲೆ ದೌರ್ಜನ್ಯ ಆಗದಂತೆ ನೋಡಿಕೊಳ್ಳಬೇಕು ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಕೆಲಸ ಆಗಬೇಕು ಎಂದು ತಿಳಿಸಿದರು
ಇತ್ತೀಚೆಗೆ ಸೋಷಿಯಲ್ ಮೀಡಿಯಾ ದಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಸಮಾಜದ ವಾತಾವರಣ ಹಾಳು ಮಾಡುತ್ತಾರೆ. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.ಯಾವ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಇರುವುದಿಲ್ಲ ಆ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಉತ್ತಮ ಪ್ರಶಿಕ್ಷಣಾರ್ಥಿಗಳಾದ ಯಶವಂತ್ ಕುಮಾರ್, ಹೇಮಂತ್ ಶರಣ್ ಜೆ. ರವಿಕುಮಾರ್ ಕೆ. ವೈ, ಶ್ರೀಮತಿ ಸ್ನೆಹರಾಜ್ ಎನ್ ಅವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗೃಹ ಸಚಿವರಾದ ಪರಮೇಶ್ವರ್, ತರಬೇತಿ ವಿಭಾಗದ ಡಿ ಜಿ ಪಿ ರವೀಂದ್ರನಾಥ್,
ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕರಾದ ಲೋಕೇಶ್ ಬಿ ಜಗಳಸರ್ ಅವರು ಉಪಸ್ಥಿತರಿದ್ದರು…