ರೌಡಿ ಶೀಟರ್ ಭೀಕರ ಕೊಲೆ…ಹಳೆ ವೈಷಮ್ಯ ಹಿನ್ನಲೆ ಕೃತ್ಯ ಶಂಕೆ…ಆರೋಪಿಗಳು ಪರಾರಿ…
- Crime
- October 2, 2023
- No Comment
- 455
ಮಂಡ್ಯ,ಅ2,Tv10 ಕನ್ನಡ
ಸ್ಕೂಟರ್ ನಲ್ಲಿ ತೆರಳುತ್ತಿದ್ದ ರೌಡಿ ಶೀಟರ್ ಓರ್ವನನ್ನ ನಾಲ್ವರು ದುಷ್ಕರ್ಮಿಗಳು ಭೀಕರವಾಗಿ ಹತ್ಯೆಗೈದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಬಳಿ ನಡೆದಿದೆ. ವಿನೋದ್ ಅಲಿಯಾಸ್ ಕುಂಟ ವಿನು (೩೨) ಕೊಲೆಯಾದ ರೌಡಿ ಶೀಟರ್.ಸ್ಕೂಟರ್ ನಲ್ಲಿ ತಮ್ಮ ಜಮೀನಿಗೆ ತೆರಳುತ್ರಿದ್ದ ವೇಳೆ ಅಟ್ಯಾಕ್ ಮಾಡಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿದ್ದಾರೆ.
ಮಾರುತಿ ಓಮಿನಿ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಸ್ಕೂಟರ್‌ನಲ್ಲಿ ಸಾಗುತ್ತಿದ್ದ ವಿನೋದನಿಗೆ ಡಿಕ್ಕಿ ಹೊಡೆದು ಕೆಳಗೆ ಬೀಳುವಂತೆ ಮಾಡಿ ನಂತರ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಮಾರುತಿ ಓಮಿನಿ ಹಳ್ಳಕ್ಕೆ ನುಗ್ಗಿದೆ.ವಾಹನವನ್ನು ಮೇಲೆತ್ತಲು ಸಾಧ್ಯವಾಗದೆ ಆರೋಪಿಗಳು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಈ ಹಿಂದೆ ವಿನೋದ್ ಗಲಾಟೆಯೊಂದರಲ್ಲಿ ಭಾಗಿಯಾಗಿದ್ದು, ಇದರ ದ್ವೇಷದ ಹಿನ್ನಲೆಯಲ್ಲಿ ಕೊಲೆ ನಡೆಸಿರುವುದಾಗಿ ಸಂಶಯವ್ಯಕ್ತವಾಗಿದೆ. ಈ ಸಂಭಂಧ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…