
ನೇಣುಬಿಗಿದು ಗೃಹಿಣಿ ಆತ್ಮಹತ್ಯೆ…ಗಂಡನ ಮನೆಯವರ ಕಿರುಕುಳ ಆರೋಪ…
- Crime
- October 3, 2023
- No Comment
- 209
ಮೈಸೂರು,ಅ3,Tv10 ಕನ್ನಡ
ಗೃಹಿಣಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಕೆ.ಆರ್.ಮೊಹಲ್ಲಾದ ವೀಣೇಶೇಷಣ್ಣ ರಸ್ತೆಯಲ್ಲಿ ನಡೆದಿದೆ.
ಸ್ಪೂರ್ತಿ (31) ಆತ್ಮಹತ್ಯೆಗೆ ಶರಣಾದ ಗೃಹಿಣಿ.ಪತಿ ಶ್ರೀಕಂಠ ಹಾಗೂ ಆತನ ತಮ್ಮನ ಪತ್ನಿಯಿಂದ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಕೇಳಿಬಂದಿದೆ.
13 ವರ್ಷದ ಹಿಂದೆ ಮದುವೆಯಾಗಿದ್ದ ಶ್ರೀಕಂಠ ಹಾಗೂ ಸ್ಪೂರ್ತಿ. ಶ್ರೀಕಂಠ ಹಾಗೂ ಆತನ ತಮ್ಮನ ಹೆಂಡತಿಯಿಂದ ಕಿರುಕುಳ ನೀಡಿದ್ದಾರೆಂದು ಸ್ಪೂರ್ತಿ ಪೋಷಕರು ಆರೋಪ ಮಾಡಿದ್ದಾರೆ.
ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರು ನೀಡಿದ್ದಾರೆ.
ಕೆ ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…