ಮಗುವನ್ನ ಕೆರೆಗೆ ಎಸೆದು ಕೊಂದ ತಂದೆ ಅಂದರ್…ಸಾಕಲು ಆಗಲ್ಲ ಎಂದು ಕೃತ್ಯ…
- TV10 Kannada Exclusive
- October 19, 2023
- No Comment
- 219
ಪಿರಿಯಾಪಟ್ಟಣ,ಅ19,Tv10 ಕನ್ನಡ
ಸಾಕಲು ಆಗಲ್ಲ ಎಂಬ ಕಾರಣಕ್ಕೆ ಮಗುವನ್ನು ಕೆರೆಗೆ ಎಸೆದು ಕೊಲೆ ಮಾಡಿದ ಪಾಪಿ ತಂದೆ ಪೊಲೀಸರ ಅತಿಥಿಯಾಗಿದ್ದಾನೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮಾಕೋಡು ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ.
ಮಾಕೋಡು ಗ್ರಾಮದ ಗಣೇಶ್ (30) ಕೊಲೆ ಆರೋಪಿ.
ಒಂದು ವರೆ ವರ್ಷದ ಮಗುವನ್ನು ಕೆರೆಗೆ ಎಸೆದು ಕೊಲೆ ಮಾಡಿದ್ದಾನೆ.
2014ರಲ್ಲಿ ಬೆಂಗಳೂರಿನ ದೇವನಹಳ್ಳಿ ತಾಲೂಕಿನ ದೊಡ್ಡಸನ್ನೆ ಗ್ರಾಮದ ನಾರಾಯಣ ಸ್ವಾಮಿ ಎಂಬುವವರ ಮಗಳು ಲಕ್ಷ್ಮೀ ಎಂಬುವವಳನ್ನು ಮದುವೆಯಾಗಿದ್ದ ಗಣೇಶ್
ದೇವನಹಳ್ಳಿಯಲ್ಲಿಯೆ ಹೆಂಡತಿಯೊಂದಿಗೆ ವಾಸವಿದ್ದ.ದಂಪತಿಗೆ
ಹಾರಿಕಾ ಮತ್ತು ದೀಕ್ಷಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದವು.
ಮತ್ತೊಂದು ಗಂಡು ಮಗುವಿನ ಹೆರಿಗೆಯಲ್ಲಿ ಪತ್ನಿ ಲಕ್ಷ್ಮಿ ತೀರಿಕೊಂಡಿದ್ದಳು.
1.5 ವರ್ಷದ ಕುಮಾರ್ ಎಂಬ ಗಂಡುಮಗುವಿನೊಂದಿಗೆ ಮಾಕೋಡು ಗ್ರಾಮಕ್ಕೆ ಗಣೇಶ್ ವಾಪ್ಸಸಾಗಿದ್ದ.
ಹೆಣ್ಣುಮಕ್ಕಳನ್ನು ಅಜ್ಜಿ ತಾತ ಬಳಿ ಬಿಟ್ಟು ಗಂಡುಮಗುವನ್ನು ತನ್ನ ತಾಯಿಯೊಂದಿಗೆ ತಾನೇ ಸಾಕಿಕೊಂಡಿದ್ದ.
ಅನೇಕ ಬಾರಿ ನಮಗೆ ವಾಪಸ್ಸು ನೀಡುವಂತೆ ನಾವೇ ಸಾಕುವುದಾಗಿ ಅತ್ತೆ ತಿಳಿಸಿದ್ದರು.
ಮಗು ಸಾಕಲು ಆಗುತ್ತಿರಲಿಲ್ಲ ಎಂದು ಕೆರೆಗೆ ಎಸೆದಿರುವ ಪಾಪಿ ತಂದೆಯನ್ನು ಪಿರಿಯಾಪಟ್ಟಣ ಪೊಲೀಸರು ಬಂಧಿಸಿದ್ದಾರೆ…