ದಂಪತಿ ನಡುವೆ ವಿರಸ…ನಾಲೆಗೆ ಹಾರಿದ ಪತ್ನಿ…ರಕ್ಷಿಸಲು ಹಾರಿದ ಪತಿ…ಪತಿ ಸಾವು…ಪತ್ನಿಗಾಗಿ ಶೋಧ…
- TV10 Kannada Exclusive
- October 20, 2023
- No Comment
- 279

ನಂಜನಗೂಡು,ಅ20,Tv10 ಕನ್ನಡ
ದಂಪತಿ ನಡುವೆ ಉಂಟಾದ ಭಿನ್ನಾಭಿಪ್ರಾಯದಿಂದ ಪತ್ನಿ ನಾಲೆಗೆ ಹಾರಿದ ಪತಿಯನ್ನ ರಕ್ಷಿಸಲು ಹೋದ ಪತಿ ನೀರುಪಾಲಾದ ಘಟನೆ ನಂಜನಗೂಡಿನ ಹರತಲೆ ಗ್ರಾಮದಲ್ಲಿ ನಡೆದಿದೆ.ಪತಿ ಮುಂದೆಯೇ ನೀರಿಗೆ ಹಾರಿದ ಪತ್ನಿಯ ಶೋಧನಾ ಕಾರ್ಯ ಮುಂದುವರೆದಿದೆ.
ನಂಜನಗೂಡು ತಾಲೂಕಿನ ಹುಸ್ಕೂರು ಗ್ರಾಮದ ಶಂಕರ್ ಮೃತ ದುರ್ದೈವಿ.ಪತ್ನಿ ಬೇಬಿಗಾಗಿ ಹುಡುಕಾಟ ಮುಂದುವರೆದಿದೆ.
ನಂಜನಗೂಡು ಪಟ್ಟಣದ ಅಪೋಲೋ ಆಸ್ಪತ್ರೆಯಲ್ಲಿ ರಿಸೆಪ್ಶನ್ ಆಗಿರುವ ಬೇಬಿಯನ್ನ
ಲಗೇಜ್ ಆಟೋ ನಡೆಸುತ್ತಿರುವ ಶಂಕರ್ ವಿವಾಹವಾಗಿದ್ದರು.ದಂಪತಿಗೆ 5 ವರ್ಷದ ಹೆಣ್ಣು ಮಗು ಇದೆ.
ನೆನ್ನೆ ಸುಮಾರು ಒಂಬತ್ತು ಗಂಟೆಯ ಸಮಯದಲ್ಲಿ ಹುಸ್ಕೂರು ಗ್ರಾಮದಿಂದ ನಂಜನಗೂಡಿಗೆ ಬರುತ್ತಿರುವ ಸಂದರ್ಭದಲ್ಲಿ ದಂಪತಿ ನಡುವೆ ಮಾತಿನ ಚಕಮಕಿ ನಡೆದಿದೆ. ಕೆಲವೇ ಕ್ಷಣಗಳಲ್ಲಿ ಆಟೋದಿಂದ ಇಳಿದ ಬೇಬಿ ಹರತಲೆ ಗ್ರಾಮದ ಕಬಿನಿ ಬಲದಂಡೆಗೆ ಹಾರಿದ್ದಾರೆ.ಪತ್ನಿಯನ್ನ ರಕ್ಷಿಸಲು ಶಂಕರ್ ಸಹ ನಾಲೆಗೆ ಹಾರಿದ್ದಾರೆ. ಪತಿ ಶಂಕರ್ ಮೃತಪಟ್ಟಿದ್ದು ಮೃತದೇಹ ಪತ್ತೆಯಾಗಿದೆ.ಪತ್ನಿ ಬೇಬಿಗಾಗಿ ನುರಿತ ಈಜುಗಾರರು ಹುಡುಕಾಟ ನಡೆಸುತ್ತಿದ್ದಾರೆ.
ನಂಜನಗೂಡು ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ನಂಜನಗೂಡು ಪಟ್ಟಣದ ವೃತ್ತ ನಿರೀಕ್ಷಕ ಸುನಿಲ್ ಕುಮಾರ್ ಭೇಟಿ ನೀಡಿ ಪರಿಶೀಲ ನಡೆಸಿದ್ದಾರೆ…