ಬಸವೇಶ್ವರ ವೃತ್ತದಲ್ಲಿ ತಲೆ ಎತ್ತಲಿರುವ ಮಧ್ಯದ ಅಂಗಡಿ…ಸ್ಥಳೀಯರ ಭಾರಿ ವಿರೋಧ…
- TV10 Kannada Exclusive
- October 20, 2023
- No Comment
- 242

ನಂಜನಗೂಡು,ಅ20,Tv10 ಕನ್ನಡ ನಂಜನಗೂಡು ಪಟ್ಟಣದ ಬಸವೇಶ್ವರ ವೃತ್ತ ಮತ್ತು ಕಸುವಿನಹಳ್ಳಿ ಗ್ರಾಮದಲ್ಲಿ ತಲೆ ಎತ್ತುತ್ತಿರುವ ಮಧ್ಯದ ಅಂಗಡಿಗೆ ಭಾರಿ ವಿರೋಧ ವ್ಯಕ್ತವಾಗಿದೆ.
ವೀರಶೈವ ಲಿಂಗಾಯತ ಸಂಘಟನೆ ಮಹಿಳೆಯರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸುತ್ತೂರು ದೇಶೀಕೇಂದ್ರ ಸ್ವಾಮೀಜಿ ಹಾಗೂ ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ ಮತ್ತು ನಂಜನಗೂಡಿನ ಶಾಸಕ ದರ್ಶನ್ ದ್ರುವ ನಾರಾಯಣ್ ರವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ದೇವಿರಮ್ಮನಹಳ್ಳಿ ಸಮೀಪದ ವಿಶ್ವಗುರು ಶ್ರೀ ಬಸವೇಶ್ವರ ವೃತ್ತದ ಬಳಿ ಹಾಗೂ ನಂಜನಗೂಡು ತಾಲೂಕಿನ ಕಸುವಿನಹಳ್ಳಿ ಗ್ರಾಮದಲ್ಲಿ ನೂತನ ಮದ್ಯದ ಅಂಗಡಿ ಸ್ಥಾಪನೆಗೆ ಸಿದ್ದತೆ ನಡೆದಿದೆ.ಇದನ್ನ ವಿರೋಧಿಸಿ ನಂಜನಗೂಡಿನ ವೀರಶೈವ ಸಂಘಟಕರು ಸೇರಿದಂತೆ ಪ್ರಗತಿಪರರು ಸಾಕಷ್ಟು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಗೆ ಸಜ್ಜಾಗಿದ್ದಾರೆ.
ಬಸವೇಶ್ವರ ವೃತ್ತದಲ್ಲಿ 101 ಲಿಂಗ ಸ್ಥಾಪನೆಯ ಪ್ರಸಿದ್ಧ ಮಠ ಜೆಎಸ್ಎಸ್ ಕಾಲೇಜು ಇದೆ. ಅತಿ ಹೆಚ್ಚು ಮಹಿಳೆಯರ ಜನಸಂದಣಿಯ ಪ್ರದೇಶವಾಗಿದೆ. ಕಸುವಿನಹಳ್ಳಿ ಗ್ರಾಮದ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಮುಂಭಾಗದಲ್ಲಿ ನೂತನ ಮದ್ಯದ ಅಂಗಡಿ ಸ್ಥಾಪನೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ಮಧ್ಯದ ಅಂಗಡಿಗೆ ಪರವಾಗಿ ನೀಡಿದ್ದಾರೆ.
ಸಾರ್ವಜನಿಕರ ವಿರೋಧ ಇದ್ದರೂ ಮಧ್ಯದ ಅಂಗಡಿ ಓಪನ್ ಗೆ ಸಜ್ಜಾಗುತ್ತಿದೆ. ಯಾವುದೇ ಕಾರಣಕ್ಕೂ ನಂಜನಗೂಡು ಪಟ್ಟಣದ ಬಸವೇಶ್ವರ ವೃತ್ತ ಮತ್ತು ಕಸುವಿನಲ್ಲಿ ಗ್ರಾಮದಲ್ಲಿ ಮಧ್ಯದ ಅಂಗಡಿ ಸ್ಥಾಪನೆ ಮಾಡಬಾರದು ಎಂದು ಸಾಕಷ್ಟು ಮಹಿಳೆಯರು ಮತ್ತು ಸಂಘಟಕರು ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ…