ಯುವ ದಸರಾ:ಬೆನ್ನಿ ದಯಾಳ್ ಗಾನಮೋಡಿ…ಮುಗಿಲು ಮುಟ್ಟಿದ ಸಂಭ್ರಮ…
- TV10 Kannada Exclusive
- October 21, 2023
- No Comment
- 158

ಯುವ ದಸರಾ:ಬೆನ್ನಿ ದಯಾಳ್ ಗಾನಮೋಡಿ…ಮುಗಿಲು ಮುಟ್ಟಿದ ಸಂಭ್ರಮ…

ಮೈಸೂರು,ಅ21,Tv10 ಕನ್ನಡ

ಯುವ ಸಮೂಹಗಳ ಆಕರ್ಷಣೆಯಾದ ಯುವ ದಸರಾದ ಕೊನೆಯ ದಿನದಂದು ಮಹಾರಾಜ ಕಾಲೇಜಿನ ಮೈದಾನದಲ್ಲಿ ಗಾಯಕ ಬೆನ್ನಿ ದಯಾಳ್ ಅವರ ಸುಮಧುರ ಗಾನಕ್ಕೆ ಹಾಗೂ ನೃತ್ಯಕ್ಕೆ ಯುವ ಸಮೂಹ ಮೈ ಮನ ಮರೆತು ಕುಣಿದು ಕುಪ್ಪಳಿಸಿತು.
ರಣ್ ವೀರ್ ಕಪೂರ್ ಅಭಿನಯದ ಯೆ ಜವಾನಿ ಹೇ ದಿವಾನಿ ಚಿತ್ರದ ಬತ್ತ ಮೇಜಿ ದಿಲ್, ಬೆಫೀಕ್ರಿ ಚಿತ್ರದ ನಶೆ ಶೆ ಚಡ್ ಗಯಾ ಸೆ, ಶಾರುಖ್ ಖಾನ್ ಅಭಿನಯದ ದಿಲ್ ಚಿತ್ರದ ಚಯಾ ಚಯಾ ಚಯಾ, ಜಾನೆ ತೊ ಜಾನೆನ ಚಿತ್ರದ ಪಪ್ಪು ಕಾಂಟ್ ಡ್ಯಾನ್ಸ್ ಹಾಡುತ್ತಿದ್ದಂತೆ ರೋಮಾಂಚನಗೊಂಡ ಯುವ ಸಮೂಹ. ಕುಣಿದು ಸಂಭ್ರಮಿಸಿತು.
ಸಿದ್ಧಾಥ್೯ ಮೆಲೋತ್ರ ಹಾಗೂ ಆಲಿಯಾ ಭಟ್ ಅಭಿನಯದ ದಿ ಡಿಸ್ಕೋ ಸಾಂಗ್, ಅಮಿತಾಬ್ ಬಚ್ಚನ್ ಚಿತ್ರದ ಚುಮ್ಮಾ ಚುಮ್ಮಾ ದೆ ದೆ ಚುಮ್ಮಾ ಚುಮ್ಮಾ ಹಾಗೂ ವೈ ದಿಸ್ ಕೊಲೆವೆರಿ ಡಿ ಯುವ ಸಮೂಹ ಶಿಳ್ಳೆ ಚಪ್ಪಾಳೆಗಳ ಸುರಿಮಳೆಯಾಯಿತು.
ಇದಕ್ಕೂ ಮುನ್ನ ಸಂವಿಧಾನವೇ ಶ್ರೇಷ್ಠ ಗ್ರಂಥ ಈ ಮೂಲಕ ಪ್ರತಿಯೊಬ್ಬರಿಗೂ ನ್ಯಾಯ ಸಿಗುತ್ತಿದೆ. ಸ್ತ್ರೀ ಸಮಾನತೆಗಾಗಿ ಹೋರಾಟ ನಡೆಸಿದ ಹಾಗೂ ಸಂವಿಧಾನದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ಜೀವನದ ಸಾಹಸ ಗಾಥೆಗಳನ್ನು ತಮ್ಮ ಅಮೋಘ ನೃತ್ಯದ ಮೂಲಕ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳ ತಂಡದವರು ತಿಳಿಸಿದರು.
ಛಾಯದೇವಿ ಬಿ.ಎಡ್ ಕಾಲೇಜ್ ವಿದ್ಯಾರ್ಥಿಗಳ ತಂಡದವರು ಬಾಲ ಕೃಷ್ಣನ ತುಂಟಾಟಗಳನ್ನು ಹಾಗೂ ರಾಧ ಕೃಷ್ಣ ಅವರ ಪ್ರೇಮ ಕಥನವನ್ನು ತಮ್ಮ ಅಮೋಘ ನೃತ್ಯದ ಮೂಲಕ ರಂಜಿಸಿದರೆ, ಗೋಪಾಲ ಸ್ವಾಮಿ ಶಿಶುವಿಹಾರ ಕಾಲೇಜಿನ ವಿದ್ಯಾರ್ಥಿಗಳು ರಾಧೆ ರಾಧೆ ಹೊ ರಾಧೆ ಶ್ಯಾಮ್ ಹಾಡಿಗೆ ಹಜ್ಜೆ ಹಾಕಿ ಕಾಳಿಂಗ ಮರ್ಧನ ಮಾಡಿ ಕೃಷ್ಣನ ದಶಾವತರಗಳನ್ನು ಯುವ ಸಮೂಹಗಳನ್ನ ಭಕ್ತಿಯ ಕಡಲಲ್ಲಿ ತೇಲುವಂತೆ ಮಾಡಿದರು.
ವಾಣಿವಿಲಾಸ ಅರಸು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ತಂಡದವರು ಕಾಂತರ ಚಿತ್ರದ ಸಿಂಗಾರ ಸಿರಿಯೇ ಹಾಗೂ ವರಾಹ ರೂಪಂ ಹಾಡಿಗೆ ಮನಮೋಹಕವಾಗಿ ನರ್ತಿಸುವ ಮೂಲಕ ಕರವಾಳಿ ನಾಡಿನ ನೃತ್ಯ ವೈಭವನ್ನು ಪ್ರೇಕ್ಷಕರ ಕಣ್ಣಮುಂದೆ ಅದ್ಭುತವಾಗಿ ಪ್ರಸ್ತುತ ಪಡಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಯೋಗ ತರಬೇತಿ ವಿದ್ಯಾರ್ಥಿಗಳ ತಂಡ ಏಕದಂತಾಯ ವಕ್ರತುಂಡಯಾ ಹಾಡಿಗೆ ಯೋಗದ ವಿವಿಧ ಭಂಗಿಗಳ ಮೂಲಕ ಉತ್ತಮ ಆರೋಗ್ಯಕ್ಕಾಗಿ ಯೋಗಾಸನದ ಮಹತ್ವವನ್ನು ಸಾರಿದರು. ಕೊಡಗಿನ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕೊಡಗಿನ ನೃತ್ಯದ ಸೊಬಗನ್ನು ಯುವ ಸಮೂಹಗಳ ಮುಂದೆ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಸದಸ್ಯರಾದ ತಿಮ್ಮಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಸೇರಿದಂತೆ ಇತರರು ಹಾಜರಿದ್ದರು…