ದಸರಾ 2023:ಹಾಲು ಕರೆಯುವ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ…
- TV10 Kannada Exclusive
- October 21, 2023
- No Comment
- 161

ದಸರಾ 2023:ಹಾಲು ಕರೆಯುವ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ…

ಮೈಸೂರು,ಅ2,Tv10 ಕನ್ನಡ

ದಸರಾ ಮಹೋತ್ಸವದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅದರಲ್ಲಿ ಹಾಲು ಕರೆಯುವ ಸ್ಪರ್ಧೆಯನ್ನ ಜೆ.ಕೆ.ಮೈದಾನದಲ್ಲಿ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಭಗವಹಿಸಿ ವಿಜೇತರಾದವರಿಗೆ ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆಯ ಸಚಿವರಾದ ಕೆ ವೆಂಕಟೇಶ್ ರವರು ಇಂದು ಬಹುಮಾನ ವಿತರಿಸಿದರು.ನಂತರ ಮಾತನಾಡಿ
ಸ್ಪರ್ಧೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಇಂಥ ಸ್ಪರ್ಧೆಯಲ್ಲಿ ಭಾಗವಹಿಸುವುದೇ ಮುಖ್ಯ. ಇದೇ ತರಹ ಮುಂದಿನ ದಿನಗಳಲ್ಲಿ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿ ಸ್ಪರ್ಧೆಯಲ್ಲಿ ಸ್ಪರ್ಧಾತ್ಮಕವಾಗಿ ಭಾಗವಹಿಸುವುದಕ್ಕೆ ಮನಸ್ಸು ಮಾಡಿ . ಸರ್ಕಾರವು ಹೈನುಗಾರಿಕೆ ಮತ್ತು ಕೃಷಿ ಸಂಬಂಧಪಟ್ಟಂತೆ ಅನೇಕ ಯೋಜನೆಗಳನ್ನು ರೂಪಿಸಿದ್ದು ಇದರ ಉಪಯೋಗ ಪಡೆದುಕೊಳ್ಳಿ. ಪಶುಸಂಗೋಪನೆಯನ್ನು ಉತ್ತೇಜಿಸಲು ಹಾಲು ಕರೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು . ನಗದು ಬಹುಮಾನ ಬಹಳ ಕಡಿಮೆಯಾಗಿದೆ, ಮುಂದಿನ ಬಾರಿ ನಗದು ಬಹುಮಾನವನ್ನು ಹೆಚ್ಚು ಮಾಡಿ ಸ್ಪರ್ಧೆಗೆ ಭಾಗವಹಿಸುವವರನ್ನು ಉತ್ತೇಜಿಸಲಾಗುತ್ತದೆ ಎಂದರು.
ಸ್ಪರ್ಧೆಯಲ್ಲಿ ಬೆಂಗಳೂರು ಕಾಮಾಕ್ಷಿಪಾಳ್ಯದ ಯೋಗೇಶ್ ರವರು 46 kg 600 ಗ್ರಾಂ ಹಾಲನ್ನು ಕರೆಯುವುದರ ಮೂಲಕ 50,000 ನಗದು ಆಕರ್ಷಕ ಟ್ರೋಪಿಯನ್ನು ಪಡೆದು ಪ್ರಥಮ ಸ್ಥಾನ ಗಳಿಸಿದರು. ಮಂಡ್ಯ ಜಿಲ್ಲೆಯ ದುದ್ದ ಗ್ರಾಮದ ಕೆ ಎಸ್ ಗೋಪಾಲಕೃಷ್ಣಯ್ಯ ರವರು 36 ಕೆಜಿ ಹಾಲನ್ನು ಕರೆಯುವುದರ ಮೂಲಕ 40,000 ನಗದು ಹಾಗೂ ಆಕರ್ಷಕ ಟ್ರೋಪಿಯನ್ನು ಪಡೆದು ದ್ವಿತೀಯ ಸ್ಥಾನ ಗಳಿಸಿದರು. ಮೈಸೂರಿನ ದೇವರಾಜ್ ಮೊಹಲ್ಲದ ಹಾರೋ ವಿನೋದ್ ರವರು 34 kg 160 ಗ್ರಾಂ ಹಾಲನ್ನು ಕರೆಯುವುದರ ಮೂಲಕ 30.000 ನಗದನ್ನು ಗಳಿಸುವ ಮೂಲಕ ತೃತೀಯ ಸ್ಥಾನವನ್ನು ಪಡೆದರು. ಆನೇಕಲ್ ತಾಲೂಕಿನ ಪಿ ಶ್ರೀನಿವಾಸ್ 34 ಕೆಜಿ 70 ಗ್ರಾಂ ಹಾಲನ್ನು ಕರೆಯುವುದರ ಮೂಲಕ 10,000 ನಗದು ಹಾಗೂ ಆಕರ್ಷಕ ಟ್ರೋಪಿಯನ್ನು ಗಳಿಸಿ ನಾಲ್ಕನೇ ಸ್ಥಾನ ಪಡೆದರು ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಸಮಾಧಾನಕರ ಬಹುಮಾನವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಸಿ ಮಹದೇವಪ್ಪ, ಪಶುಪಾಲನಾ ಇಲಾಖೆಯ ಉಪನಿರ್ದೇಶಕರಾದ ನಾಗರಾಜು, ಹಾಗೂ ರೈತ ದಸರಾ ಉಪ ಸಮಿತಿ ಸದಸ್ಯರು ಹಾಜರಿದ್ದರು…